ಯಡಿಯೂರಪ್ಪ ಕೊಟ್ಟಿದ್ದು ಬರೀ ಸೀರೆ, ಸೈಕಲ್

IMG-20230805-WA0027
Published on

ಕಲಬುರಗಿ: ದೇಶದ ಪ್ರತಿ ನಾಗರಿಕರೂ ಕೂಡ ಐದು ಗ್ಯಾರಂಟಿ ಬಗ್ಗೆ ನೋಡುತ್ತಿದ್ದಾರೆ. ಸ್ಟ್ಯಾಲಿನ್, ಮಮತಾ ಬ್ಯಾನರ್ಜಿ ಕೇಳಿದ್ದಾರೆ. ಪ್ರಧಾನ ಮಂತ್ರಿ ಟೀಕಿಸಿದರು. ದೇವರೂ ವರವೂ ನೀಡಲ್ಲ, ಶಾಪವೂ ಕೊಡಲ್ಲ ಅವಕಾಶ ಕೊಡುತ್ತಾನೆ. ಆದರೆ ಕೇಂದ್ರ ಸರ್ಕಾರ ಬಂಡವಾಳದಾರ ಸಾಲ ಮನ್ನಾ ಮಾಡಿದೆ. ಯುವಕರಿಗೆ ಶಕ್ತಿ ತುಂಬಲು ಯುವ ಶಕ್ತಿ ಯೋಜನೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಲಬುರಗಿಯಲ್ಲಿ ನಡೆದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, 371 ಜೆ ತಂದು ಖರ್ಗೆ ಅವರು ಬದುಕಿನ ಜ್ಯೋತಿ ಬೆಳಗಿಸಿದರು. ಅದರಂತೆ ಜನರ ಮನೆ ಜ್ಯೋತಿ ಬೆಳಗಿಸುವ ಯೋಜನೆ ತಂದಿದ್ದೇವೆ. ಮಹಾತ್ಮ ಗಾಂಧೀಜಿ ಬೆಳಗಾವಿಯಲ್ಲಿನ ಭಾವಿ ಸ್ವಚ್ಛ ಮಾಡಿ ಸಂದೇಶ ಸಾರಿದ್ದರು. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರ ಮುಖಂಡತ್ವದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಮೊದಲ ಉಚಿತ ಗ್ಯಾರಂಟಿ ಯೋಜನೆ ಜಾರಿಗೆ ಘೋಷಿಸಿದ್ದು, ಅದನ್ನು ಜಾರಿಗೆ ತರಲಾಗಿದೆ. ಮರಕ್ಕೆ ಬೇರಿನಷ್ಟೆ ಮನುಷ್ಯನಿಗೆ ನಂಬಿಕೆ ಮುಖ್ಯ. ಅದರಂತೆ ಈಡೇರಿಸಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರ ಮತ್ತು ಜನರ ಮಧ್ಯದ ಸಂಬಂಧ ಭಕ್ತರಂತೆ. ಯಡಿಯೂರಪ್ಪ ಒಂದು ಸೈಕಲ್ಲೂ, ಒಂದು ಸೀರೆ ಕೊಟ್ಟಿದ್ರು. ಒಂದು ಕುಟುಂಬಕ್ಕೆ ವರ್ಷಕ್ಕೆ 60 ಸಾವಿರ ಕೊಡುತ್ತಿದ್ದೇವೆ. ಬಿಜೆಪಿ ಸರ್ಕಾರ ಕೊಟ್ಟಿತ್ತಾ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net