ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜನರಲ್ಲಿ ಮಾಡಿದರೊಂದು ಮನವಿ..!

Lakshmi Hebbalkar
Published on

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮನೆ ಮೇಲಿನ ಸಿಬಿಐ ದಾಳಿಯು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಉಪಚುನಾವಣೆಯ ಸಂದರ್ಭ. ಹೀಗಾಗಿ ಈ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಉಪಚುನಾವಣೆ ಒಂದು ತಿಂಗಳು ಇದೆ‌. ಜನರೇ ನೀವೇ ವಿಚಾರ ಮಾಡಿ ಎಂದು ಮನವಿ ಮಾಡಿದರು.

ಚುನಾವಣೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳುತ್ತಿದ್ದೇವೆ. ಆ ದುರುದ್ದೇಶ ಇಟ್ಟುಕೊಂಡು ದಾಳಿ ಮಾಡಿದೆ. ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದ್ದಾರೆ ಎಂಬುದನ್ನು ಡಿಕೆಶಿಯವರನ್ನು ಕೇಳಿ. ಇಡಿ, ಐಟಿ ಅಥವಾ ಸಿಬಿಐ ಯಾವುದೇ ದಾಳಿ ಇರಲಿ ನಮ್ಮ ನಾಯಕರು ಸಮರ್ಥರಿದ್ದಾರೆ. ಕಾನೂನು ಮೇಲೆ ನಮಗೆ ವಿಶ್ವಾಸ ಇದೆ. ಕಾನೂನುಗೆ ತಲೆ ಬಾಗಲೇಬೇಕು ಎಂದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ನಮಗೆ ಅಡಚಣೆ ಮಾಡುವ ನಿಟ್ಟಿನಲ್ಲಿ ಈ ದಾಳಿ ಮಾಡಿದ್ದಾರೆ‌. ಏನಾಗುತ್ತದೆ ಮುಂದೆ ನೋಡೋಣ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net