ಸಿಎಂ ಆಗೋ ಆಸೆ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್​: ಪ್ರೋತ್ಸಾಹ ನೀಡುವಂತೆ ಒಕ್ಕಲಿಗರಲ್ಲಿ ಮನವಿ

DKS
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ದಿನದಿಂದ ದಿನಕ್ಕೆ ಪ್ರಬಲ ಪೈಪೋಟಿ ಶುರುವಾಗಿದೆ.

ಚುಂಚಶ್ರೀ ಬಳಗ ಭಾನುವಾರ ವಿಶ್ವೇಶ್ವರಯ್ಯಪುರದ ರಾಜ್ಯ ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸತ್ಸಂಗ ಮತ್ತು ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಾವು ಸಿಎಂ ಆಗಬೇಕೆಂಬ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟರು.

ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ಅವರು 5 ವರ್ಷ ಸಿಎಂ ಆಗಿ ಆಡಳಿತ ನಡೆಸಿದ್ದ ನಂತರ ಇದೇ ಸಮುದಾಯದ ನನಗೆ ಸಿಎಂ ಆಗುವ ಅವಕಾಶ ಒದಗಿ ಬಂದಿದೆ. ಇದನ್ನು ನಮ್ಮ ಸಮುದಾಯದ ಜನರು ಯಾರೂ ಹಾಳು ಮಾಡಿಕೊಳ್ಳದೆ ನನಗೆ ಪ್ರೋತ್ಸಾಹ ನೀಡಬೇಕು ಎಂದರು.

ಯಾರಿಗೂ ತೊಂದರೆ ಕೊಡದೆ ಕಷ್ಟಪಟ್ಟು ಮತ್ತು ಶ್ರಮಪಟ್ಟು ಈ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಬಂದಿದ್ದೇನೆ. ನನಗೆ ಒಂದು ಬಾರಿ ಅವಕಾಶ ನೀಡಿದರೆ ಸಿಎಂ ಆಗುತ್ತೇನೆ ಎಂದು ವೇದಿಕೆಯಲ್ಲಿದ್ದ ಸಮುದಾಯದ ಜನರಿಗೆ ಡಿಕೆಶಿ ಮನವಿ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net