

ಬೆಂಗಳೂರು: ಕಳೆಗುಂದುತ್ತಿರುವ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಬಿಟ್ಟವರನ್ನು ಸೆಳೆಯಲು ಹಾಗೂ ಇತರೆ ಪಕ್ಷದಲ್ಲಿರುವವರ ಮುಖಂಡರನ್ನು ಕಾಂಗ್ರೆಸ್ಗೆ ಕರೆತರಲು ಡಿಕೆಶಿ ಸೂಚನೆ ನೀಡಿದ್ದಾರೆನ್ನಲಾಗಿದೆ. ಇದಕ್ಕಾಗಿಯೇ ಅಲ್ಲಂವೀರಭದ್ರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿರುವ ಕಾಂಗ್ರೆಸ್, ಪಕ್ಷದ ಬಲವರ್ಧನೆಗಾಗಿ ಆಪರೇಷನ್ ಹಸ್ತಕ್ಕೆ ಚಾಲನೆ ನೀಡಿದೆ.
ಪಕ್ಷ ಬಿಟ್ಟುಹೋಗಿರುವ ಮುಖಂಡರನ್ನು ಗುರುತಿಸುವಂತೆ ಹಾಗೂ ಪಕ್ಷ ಸೇರಲು ಇಚ್ಚಿಸುವ ಇತರೆ ಪಕ್ಷದ ಮುಖಂಡರ ಪಟ್ಟಿ ತಯಾರು ಮಾಡುವಂತೆ ಡಿಕೆಶಿ ಸೂಚನೆ ನೀಡಿದ್ದು, ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.