ಮಗಳ ಮದುವೆ ನಿಶ್ಚಯ ಮಾಡಿದ ಡಿ.ಕೆ.ಶಿವಕುಮಾರ್​ಗೆ ಎದುರಾಯ್ತು ಸಂಕಷ್ಟ!

DKS
Published on

ಬೆಂಗಳೂರು: ನಿನ್ನೆ (ಸೋಮವಾರ) ಮಗಳ ಮದುವೆ ನಿಶ್ಚಯ ಕಾರ್ಯಕ್ರಮ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಕಾನೂನು ಸಂಕಷ್ಟ ಎದುರಾಗಿದೆ.

ಮಾಜಿ ಮುಖ್ಯಮಂತ್ರಿ, ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಮಗ ಅಮಾರ್ಥ್ಯ ಹೆಗ್ಡೆ ಜತೆ ಡಿಕೆಶಿ ಪುತ್ರಿ ಐಶ್ವರ್ಯಾ ಮದುವೆ ನಿಶ್ಚಯ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಇದನ್ನೂ ಓದಿ: ಮಹಿಳೆಯನ್ನು ಹೊತ್ತೊಯ್ದ ಮೊಸಳೆ ಬೇಟೆಯಾಡಿ ಹೊಟ್ಟೆ ಬಗೆದು ನೋಡಿದಾಗ ಕಾದಿತ್ತು ಶಾಕ್​!

ಆದರೆ, ಮದುವೆ ನಿಶ್ಚಯ ಕಾರ್ಯಕ್ರಮದಲ್ಲಿ ಕರೊನಾ ವೈರಸ್​ ಮಾರ್ಗಸೂಚಿ ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುನ್ನೆಚ್ಛರಿಕಾ ಕ್ರಮವಾಗಿ ಮಾಸ್ಕ್ ಧರಿಸದ ಹಿನ್ನಲೆಯಲ್ಲಿ ಹೈಕೋರ್ಟ್​ನಲ್ಲಿ ದೂರು ದಾಖಲಾಗಿದೆ.

ವಕೀಲ ಜಿ.ಆರ್.ಮೋಹನ್​ರಿಂದ ದೂರು ದಾಖಲಾಗಿದ್ದರು, ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಜೂನ್ 18 ರಂದು ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net