ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಸಾಧಕರಿಗೆ ಸನ್ಮಾನ

IMG-20230818-WA0106
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ 25ನೇ ’ಇಂಡಿಪೆಂಡೆನ್ಸ್ ಕಪ್’ ಫುಟ್ಬಾಲ್ ಪಂದ್ಯಾಟದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ’ರನ್ನರ್ಸ್ ಅಪ್ ’ ಪ್ರಶಸ್ತಿ ಪಡೆದ ಸಂತ ಥೆರೆಸಾ ಸ್ಕೂಲ್ ನ ಫುಟ್ಬಾಲ್ ತಂಡದ ಸದಸ್ಯರನ್ನು ಶಾಲೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಭ.ಲೂರ್ಡ್ಸ್ ಅವರು, ವಿದ್ಯಾರ್ಥಿಗಳು ನಾವೆಲ್ಲರೂ ಹೆಮ್ಮೆ ಪಡುವ ಸಾಧನೆಯನ್ನು ಮಾಡಿದ್ದಾರೆ. ಇದು ನಮಗೆಲ್ಲರಿಗೂ ಸ್ಫೂರ್ತಿ. ಒಟ್ಟು 72 ತಂಡಗಳು ಭಾಗವಹಿಸಿದ ಈ ಪಂದ್ಯಾಟದಲ್ಲಿ ನಮ್ಮ ಶಾಲಾ ತಂಡವು ’ರನ್ನರ್ಸ್ ಅಪ್ ’ ಪ್ರಶಸ್ತಿ ಪಡೆದಿರುವುದು ಅಮೋಘ ಸಾಧನೆಯಾಗಿದೆ ಎಂದು ಅವರು ಹೇಳಿದರು.
ಫುಟ್ಬಾಲ್ ತರಬೇತುದಾರರಾದ ಅಂಟೋನಿ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜೋಸೆಫ್ ರೋಡ್ರಿಗಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net