ಜೆಡಿಎಸ್‌ ಬಲಿಷ್ಠವಾಗಿಯೇ ಇದೆ; ಮಹಿಳಾ ಸಮಾವೇಶ ಉದ್ಘಾಟಿಸಿ ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ್

Published on


ಮಂಗಳೂರು: ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ನ ನಡೆ, ತತ್ವ ಸಿದ್ದಾಂತವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅನುಸರಿಸುತ್ತಿದೆ. ಕಷ್ಟ ಬಂದಾಗ ಈ ಎರಡೂ ಪಕ್ಷಗಳು ಬರುವುದು ಜೆಡಿಎಸ್ ಮನೆ ಬಾಗಿಲಿಗೆ. ಆದ್ದರಿಂದ ರಾಜ್ಯದಲ್ಲಿ ಜಾತ್ಯತೀತ ಜನತಾದಳ ಇನ್ನೂ ಬಲಿಷ್ಠವಾಗಿಯೇ ಇದೆ ಎಂದು ಜೆಡಿಎಸ್ ಮಹಿಳಾ ಘಟಕ ರಾಜ್ಯಾಧ್ಯಕ್ಷೆ, ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳ ಮಹಿಳಾ ಘಟಕ ವತಿಯಿಂದ ಭಾನುವಾರ ಕದ್ರಿ ಪಾರ್ಕ್ ಬಳಿಯ ಲಯನ್ಸ್ ಅಶೋಕ ಸಭಾಭವನದಲ್ಲಿ ಆಯೋಜಿಸಲಾದ ಮಹಿಳಾ ಸಮಾವೇಶ, ಮಹಿಳಾ ದಿನಾಚರಣೆ ಮತ್ತು ಸಾಮರಸ್ಯ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಜೆಡಿಎಸ್ ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷೆ ರೂತ್ ಮನೋರಮಾ ಮುಖ್ಯ ಅತಿಥಿಯಾಗಿದ್ದರು. ಮುಖಂಡರಾದ ಜಾಕೆ ಮಾಧವ ಗೌಡ, ಎಂ.ಬಿ.ಸದಾಶಿವ, ವಸಂತ ಪೂಜಾರಿ, ಸುಶೀಲ್ ನರೋನ್ಹ, ಅಕ್ಷಿತ್ ಸುವರ್ಣ, ಪ್ರವೀಣ್‌ಚಂದ್ರ ಜೈನ್, ರತ್ನಾಕರ ಸುವರ್ಣ, ಮೀರಾ ಸಾಹೇಬ್ ಕಡಬ, ಧನರಾಜ್, ಫಿಲೋಮಿನಾ, ಕೈಲಾಸ್‌ಗೌಡ, ಶಿಲಾಮಣಿ, ಮುನೀರ್ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮತಿ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಪದಾಧಿಕಾರಿಗಳಾದ ವೀಣಾ ಜಯಂತ ಶೆಟ್ಟಿ ಸ್ವಾಗತಿಸಿ, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net