ಶರಣ್ ಮೇಲಿನ ಪ್ರಕರಣ ಹಿಂಪಡೆಯಲು ಬಿಜೆಪಿ ಆಗ್ರಹ

ffffffffff
Published on


ಮಂಗಳೂರು :ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವ ಸಂದರ್ಭ ನಡೆಯುವ ವ್ಯಾಪಾರ ವಿಚಾರವಾಗಿ ಶರಣ್ ಪಂಪ್‌ವೆಲ್ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ವಿನಾ ಕಾರಣ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿರುವ ಪೋಲಿಸ್
ಇಲಾಖೆಯ ಕ್ರಮವನ್ನು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಯ ಪ್ರಕಾರ ಹಿಂದೂ ಧಾರ್ಮಿಕ ಕ್ಷೇತ್ರದ ಪರಿಸರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ವ್ಯವಹಾರ ಮಾಡಲು ಅವಕಾಶವಿರುವುದಿಲ್ಲ. ದೇವಸ್ಥಾನದ ಸಾಮಾಗ್ರಿ ಸರಬರಾಜು ಹಾಗೂ ಜಾತ್ರಾ ಸಂದರ್ಭದ ವ್ಯಾಪಾರ ವ್ಯವಹಾರಗಳ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಅನ್ಯಮತೀಯರಿಗೆ ಭಾಗವಹಿಸಲು ಅವಕಾಶವಿಲ್ಲ. ಈ ನಿಯಮಾವಳಿಯ ಪ್ರಕಾರ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥಿತವಾಗಿ ಟೆಂಡರ್ ಪ್ರಕ್ರಿಯೆ ನಡೆಸಿಯೇ ವ್ಯಾಪಾರ ನಡೆಸಲು ಹಿಂದೂಗಳಿಗೆ ಗುತ್ತಿಗೆ ನೀಡಿರುತ್ತಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಂದೂಗಳು ಗುತ್ತಿಗೆ ಪಡೆದಿರುವ ಅಂಗಡಿಗಳಲ್ಲಿ ಕೇಸರಿ ಧ್ವಜವನ್ನು ಹಾಕಿರುವುದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಹಿಂದೂಗಳು ತಮ್ಮ ಅಂಗಡಿಗಳಲ್ಲಿ ಕೇಸರಿ ಧ್ವಜ ಅಳವಡಿಸಲು ಯಾರ ಅನುಮತಿಯೂ ಬೇಕಿಲ್ಲ. ಕೇಸರಿ ಧ್ವಜ ಅಳವಡಿಸಿರುವ ಅಂಗಡಿ ಮಾಲೀಕರು ಯಾರೂ ಕೂಡ ಈ ಬಗ್ಗೆ ದೂರು ನೀಡಿರುವುದಿಲ್ಲ. ಯಾವುದೇ ದೂರು ಇಲ್ಲದೇ ಕೇವಲ ರಾಜಕೀಯ ಒತ್ತಡದಿಂದ ಹಾಗೂ ಮುಸ್ಲಿಂರನ್ನು ಓಲೈಸಲು ವಿನಾಕಾರಣ ಶರಣ್ ಪಂಪ್‌ವೆಲ್ ಮತ್ತು ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿದೆ.
ಸರ್ಕಾರ ತಕ್ಷಣ ಈ ಪ್ರಕರಣವನ್ನು ಹಿಂಪಡೆಯಬೇಕು ಸುದರ್ಶನ ಎಂ. ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net