ನಾರಾಯಣಗುರುಗಳ ಸಾಮಾಜಿಕ ಸುಧಾರಣೆಯಿಂದ ಶೂದ್ರ ಸಮುದಾಯಕ್ಕೆ ಸ್ವಾತಂತ್ರ್ಯ- ಕಾಂಗ್ರೆಸ್‌ ಹಿಂದುಳಿದ ವರ್ಗ ಕಾಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ ಬಣ್ಣನೆ

mng- sep 1- congress nArAyana guru
Published on

ಮಂಗಳೂರು: ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೂದ್ರ ಸಮುದಾಯಕ್ಕೆ ಹೆಚ್ಚಿನ ಸ್ವಾತಂತ್ರ್ಯದೊರೆಯುವಲ್ಲಿ ಶ್ರೀ ನಾರಾಯಣ ಗುರುಗಳ ಸಾಮಾಜಿಕ ಸುಧಾರಣೆಯ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದಿಂದ ನಗರದ ಕಾಂಗ್ರೆಸ್‌ ಭವನದಲ್ಲಿ ಜರುಗಿದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಕಾಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

 ಪ್ರಸ್ತಾವನೆಗೈದ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಅವರು, ಸಮಸ್ತ ಮಾನವ ಸಮಾಜದ ಬದುಕಿಗೆ ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತಿವೆ. ಹಿಂದುಳಿದ ವರ್ಗಗಳು ಇಂದು ಘನತೆಯಿಂದ ಬದುಕ ಬೇಕಾಗಿದ್ದಾರೆ ಗುರುಗಳು ಮಾಡಿದ ಸಮಾಜ ಸುಧಾರಣೆಗಳು ಕಾರಣ ಎಂದರು.

ಗುರು ಸಂದೇಶ ನೀಡಿದ ರಾಜೇಂದ್ರ ಚಿಲಿಂಬಿ ಅವರು, ಬ್ರಹ್ಮ ಶ್ರೀ ನಾರಾಯಣ ಗುರುಗಳು ಸ್ವಾಭಿಮಾನದಿಂದ ನಡೆಸಿದ ಸಾಮಾಜಿಕ ಸುಧಾರಣೆಯ ಚಳುವಳಿಗಳು, ಆತ್ಮೋನ್ನತಿಯ ಸಾಧನೆಗೆ ಜಾತಿ ಭೇಧ ಮತದ್ವೇಷ ಇಲ್ಲದೆ ಸರ್ವರೂ ಸಹೋದರತ್ವ ದಿಂದ ಬಾಳುವ ಗುರುಗಳ ಧಾರ್ಮಿಕ ಸುಧಾರಣೆಗಳ ಆಶಯಕ್ಕೆ ಪೂರಕವಾಗಿದೆ ಎಂದರು.

ಮಾಜಿ ಶಾಸಕ ಜೆ. ಆರ್ ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಗುರುಗಳ ಸಂದೇಶ ನೀಡಿದರು. ಮುಖಂಡರಾದ ಪದ್ಮರಾಜ್ ಆರ್, ಎಂ ಶಶಿಧರ ಹೆಗ್ಡೆ, ಪ್ರಕಾಶ್ ಬಿ ಸಾಲ್ಯಾನ್, ಎ. ಸಿ. ಜಯರಾಜ್, ಉಮೇಶ್ ದಂಡಕೇರಿ,ಇಬ್ರಾಹಿಂ ಕೋಡಿಂಜಾಲ್, ಶಾಹುಲ್ ಹಮೀದ್, ಗಣೇಶ್ ಗಂಜಿಮಠ, ರಾಕೇಶ್ ದೇವಾಡಿಗ, ಹರಿನಾಥ್ ಜೋಗಿ, ಉಲ್ಲಾಸ್ ಕೋಟ್ಯಾನ್,ಕೇಶವ ಮರೋಳಿ, ದೀಪಕ್ ಪಿಲಾರ್, ಸಲೀಮ್,ರವಿರಾಜ್ ದಂಬೆಲ್, ಮುಂತಾದವರು ಉಪಸ್ಥಿತರಿದ್ದರು. ಸುರೇಶ್ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net