ಮತ್ಸ್ಯಸಂಪದ ಯೋಜನೆಯಲ್ಲಿ 26 ಸಾವಿರ ಕೋಟಿ ರೂ. ಅನುದಾನ

udp-7-yashpal
Published on

ಉಡುಪಿ: ಕೇಂದ್ರ ಸರ್ಕಾರ ಪ್ರತ್ಯೇಕ ಮೀನುಗಾರಿಕಾ ಇಲಾಖೆಯನ್ನು ರಚಿಸಿದ ಬಳಿಕ ಮೀನುಗಾರರಿಗೆ ಹೆಚ್ಚಿನ ನೆರವು ಲಭ್ಯವಾಗುತ್ತಿದೆ. ಈ ಬಾರಿ ಬಜೆಟ್​ನಲ್ಲಿ ಮತ್ಸ್ಯ ಸಂಪದ ಯೋಜನೆಗೆ 26,000 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕರ್ನಾಟಕಕ್ಕೆ ಗರಿಷ್ಠ 5 ಸಾವಿರ ಕೋಟಿ ರೂ. ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಬುಧವಾರ ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ ಮೀನುಗಾರಿಕೆ ಸಚಿವಾಲಯ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್​ ವತಿಯಿಂದ ನಡೆದ "ಮೀನುಗಾರಿಕೆ ವಲಯದಲ್ಲಿ ದೇಶೀಯ ಮಾರುಕಟ್ಟೆಗೆ ಉತ್ತೇಜನ" ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಹಿತಿ ಕೊರತೆಯಿಂದ ಮೀನುಗಾರರಿಗೆ ಹೆಚ್ಚಿನ ಸರಕಾರಿ ಪ್ರಯೋಜನಗಳು ಸಿಗುತ್ತಿಲ್ಲ. ಹೀಗಾಗಿ ಮೀನುಗಾರಿಕಾ ಸಹಕಾರಿ ಸಂಘಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಮೀನುಗಾರರಿಗೆ 3 ಲಕ್ಷ ರೂ. ಸಾಲ ಯೋಜನೆ ಘೋಷಿಸಿದ್ದರೂ ರಾಷ್ಟ್ರೀಕೃತ ಬ್ಯಾಂಕ್​ ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳ ಸಹಯೋಗ ಪಡೆಯದೆ ಇರುವುದರಿಂದ ಅದರ ಪ್ರಯೋಜನ ಮೀನುಗಾರರಿಗೆ ಸಿಗುತ್ತಿಲ್ಲ ಎಂದರು.

ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸಿ.ಕೆ. ಮೂರ್ತಿ ಮಾತನಾಡಿ, 90ರ ದಶಕದಲ್ಲಿ ಏನ್​ಸಿ ಡಿ ಸಿ ಸಂಸ್ಥೆಯ ನೆರವಿನಿಂದ ಸಮಗ್ರ ಕರಾವಳಿಯಲ್ಲಿ ಮೀನುಗಾರಿಕೆ ಪುನಶ್ಚೇತನಕ್ಕೆ 30 ಕೋಟಿ ರೂ. ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸಲಾಗಿತ್ತು. ಇದರಿಂದ ಈ ಭಾಗದಲ್ಲಿ ಅತಿ ಹೆಚ್ಚಿನ ಮೀನುಗಾರಿಕಾ ಬೆಳವಣಿಗೆಗೆ ಅವಕಾಶ ಲಭ್ಯವಾಯಿತು. ಮಂಜುಗಡ್ಡೆ ಘಟಕಗಳು, ಮೀನು ಸಂಸ್ಕರಣ ಕೇಂದ್ರಗಳು ನಿಮಾರ್ಣಗೊಂಡಿದ್ದವು. ಇತ್ತೀಚಿನ ದಿನಗಳಲ್ಲಿ ಮೀನು ಲಭ್ಯತೆ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೀನುಗಳು ವ್ಯರ್ಥವಾಗದಂತೆ ಉಪಯೋಗಕಾರಿಯಾಗುವಂತೆ ಮಾಡುವ ನಿಟ್ಟಿನಲ್ಲಿ ಎ್​ಪಿಒ ಮೂಲಕ ಮತ್ಸೋದ್ಯಮ ಬೆಳೆಸುವ ಅವಕಾಶವಿದೆ. ಇದರಿಂದ ಮೀನುಗಾರರ ಆದಾಯವು ಹೆಚ್ಚಲಿದೆ. ಹಾರ್ದಿಕ ಸ್ವಾವಲಂಬನೆ ಸಾಧ್ಯವಿದೆ ಎಂದರು.

ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್​ ಆರ್​., ಲೆಕ್ಕಪರಿಶೋಧಕ ಪ್ರಸನ್ನ ಶೆಣೈ, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಸಹಾಯಕ ನಿರ್ದೇಶಕ ಹರಿಪ್ರಸಾದ್​, ೆಡರೇಶನ್​ ವ್ಯವಸ್ಥಾಪಕ ನಿರ್ದೇಶಕಿ ದರ್ಶನಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net