ಡಿಜೆ ಶಬ್ದಕ್ಕೆ ಯುವಕರ ನೃತ್ಯ

12LNG02
Published on

ಲಿಂಗಸುಗೂರು: ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಸಂಘದಿಂದ ಪ್ರತಿಷ್ಠಾಪಿಸಿದ್ದ 22 ಅಡಿ ಎತ್ತರದ ಗಣಪತಿ ಮೂರ್ತಿ ಹಾಗೂ ಡಾಲರ್ಸ್‌ ಕಾಲನಿ ಗಣೇಶ ಮೂರ್ತಿಗಳನ್ನು ಬುಧವಾರ ಐದನೇ ದಿನಕ್ಕೆ ವಿಸರ್ಜನೆ ಮಾಡಲಾಯಿತು.

ಬುಧವಾರ ರಾತ್ರಿಯಿಡಿ ಸಾವಿರಾರು ಯುವಕರು ಡಿಜೆ ಶಬ್ದಕ್ಕೆ ನೃತ್ಯ ಮಾಡಿದರು. ಹಿಂದು ಜಾಗರಣ ವೇದಿಕೆ, ಸಾಯಿ ಯುವಕ ಸಂಘ, ಖೋಖೋ ಬಾಯ್ಸ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಏಳನೇ ದಿನ ಹಾಗೂ ದೊಡ್ಡ ಹನುಮಂತ ದೇವಸ್ಥಾನ ಬಳಿಯ ಹಿಂದು ಗಣೇಶ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯನ್ನು ಒಂಬತ್ತನೇ ದಿನ ವಿಸರ್ಜಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net