ಡಿಜೆ ಬಳಸಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

DJ
Published on

ಮಡಿಕೇರಿ:

ನಿಯಮ ಮೀರಿ ಡಿಜೆ ಬಳಸಿದವರಿಗೆ ಕುಶಾಲನಗರ ಪೊಲೀಸರು ಬಿಸಿಮುಟ್ಟಿಸಿದ್ದಾರೆ. ಭಾನುವಾರ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಭಾರಿ ವಾಹನಗಳಲ್ಲಿ 110 ರಿಂದ 120 ಡೆಸಿಬಲ್‌ವರೆಗಿನ ಹೈ ಫ್ರೀಕ್ವೆನ್ಸಿ ಹೊರಹೊಮ್ಮುವ ಪ್ರೆಷರ್ ಮಿಡ್ ಸ್ಪೀಕರ್‌ಗಳನ್ನು ಬಳಸಿದ ಕಾರಣಕ್ಕೆ ಸೌಂಡ್ಸ್ ಸಿಸ್ಟಂ ಬಳಸಿದ 5 ವಾಹನಗಳ ಚಾಲಕರುಗಳ ವಿರುದ್ಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಬಳಸಿದ್ದ ಪ್ರೆಷರ್ ಮಿಡ್ ಸ್ಪೀಕರ್‌ಗಳು ಮತ್ತು 5 ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಕಾಯಿದೆ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿರುವ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ಸ್ ಸಿಸ್ಟಂ ಉಪಕರಣಗಳನ್ನು ಬಳಸದಂತೆ ಪೊಲೀಸ್ ಇಲಾಖೆ ವತಿಯಿಂದ ಈಗಾಗಲೇ ಸೂಚನೆಗಳನ್ನು ನೀಡಲಾಗಿತ್ತು. ನಂತರ ಗಣಪತಿ ವಿಸರ್ಜನೆ ಸಂದರ್ಭವೂ ಈ ಸೌಂಡ್ ಸಿಸ್ಟಂ ಬಳಸದಂತೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಿಳಿಸಿದ್ದರೂ ಹೈ ಫ್ರೀಕ್ವೆನ್ಸಿ ಹೊರಹೊಮ್ಮುವ ಪ್ರೆಷರ್ ಮಿಡ್ ಸ್ಪೀಕರ್‌ಗಳನ್ನು ಬಳಸಿದ ಕಾರಣಕ್ಕೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಕೆ. ರಾಮರಾಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net