ಹಿರಿಯರ ನಂಬಿಕೆ ಮೂಢನಂಬಿಕೆಯಲ್ಲ : ವೆಂಕಟೇಶ್ ಅನಂತಾಡಿ ಅಭಿಮತ

New Project (20)
Published on

ಕಡಬ: ಪ್ರಕೃತಿಯೊಂದಿಗೆ ಬೆರೆತು ಜೀವನ ರೂಢಿಸಿಕೊಂಡ ನಮ್ಮಹಿರಿಯರ ನಂಬಿಕೆಗಳು ಮೂಡನಂಬಿಕೆಯಲ್ಲ. ಅದು ಮೂಲ ನಂಬಿಕೆ ಎಂದು ಸಬಳೂರು ಸರ್ಕಾರಿ ಪಾಥಮಿಕ ಶಾಲಾ ಶಿಕ್ಷಕ ವೆಂಕಟೇಶ್ ಅನಂತಾಡಿ ಹೇಳಿದರು.

ಸಬಳೂರು ಅಯೋಧ್ಯಾನಗರ ಶ್ರೀರಾಮ ಗೆಳೆಯರ ಬಳಗ ವತಿಯಿಂದ ಶ್ರೀರಾಮ ಭಜನಾ ಮಂದಿರ ವಠಾರದಲ್ಲಿ ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡಾಕೂಟ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಭಜನಾ ಮಂಡಳಿ ಅಧ್ಯಕ್ಷ ಕೆ.ಎಸ್ ಬಾಲಕೃಷ್ಣ ಕೊಲ್ಯ ಅಧ್ಯಕ್ಷತೆ ವಹಿಸಿದ್ದರು. ಭಜನಾ ಮಂಡಳಿ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ತಿಮರೆಗುಡ್ಡೆ, ಗೆಳೆಯರ ಬಳಗ ಗೌರವಾಧ್ಯಕ್ಷ ಬಾಲಕೃಷ್ಣ ಓಕೆ, ಅಧ್ಯಕ್ಷ ಯತೀನ್ ಪಟ್ಟೆದಮೂಲೆ ಉಪಸ್ಥಿತರಿದ್ದರು. ಕ್ರೀಡಾನಿರ್ಣಯಕರಾದ ವಿಶ್ವನಾಥ ರಾಮಕುಂಜ, ಆಶೋಕ್ ಕೊಲ ಅವರನ್ನು ಗೌರವಿಸಲಾಯಿತು. ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚಿದಾನಂದ ಪಾನ್ಯಾಲು ಸ್ವಾಗತಿಸಿದರು. ಭುವನೇಶ್ ಬುಡಲೂರು ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಪ್ರಶಾಂತ್ ಸಬಳೂರು ವಂದಿಸಿದರು. ಶಿಕ್ಷಕ ಪರಮೇಶ್ವರ ಸಬಳೂರು ನಿರೂಪಿಸಿದರು.

ಪ್ರಕೃತಿ ಉಳಿವಿನ ಸಂಕಲ್ಪದೊಂದಿಗೆ ನಮ್ಮ ಎಲ್ಲಾ ಹಬ್ಬಗಳ ಆಚರಣೆಗಳು ಬೆಳೆದು ಬಂದಿವೆ. ದೇವರ ನಾಮ ಸಂಕೀರ್ತನೆ ದೇವರನ್ನು ಒಲಿಸಿಕೊಳ್ಳಲು ಸುಲಭದ ದಾರಿ. ಇಂತಹ ಸಂಸ್ಕಾರ ಸಿಗುವ ಭಜನಾ ಮಂದಿರ ಕಾರ್ಯಕ್ರಮದಲ್ಲಿ ಮಕ್ಕಳು ತೊಡಗಿಸಿಕೊಳ್ಳವಂತೆ ಪ್ರೇರಣೆ ನೀಡುವುದು ಎಲ್ಲರ ಕರ್ತವ್ಯ. ವೆಂಕಟೇಶ್ ಅನಂತಾಡಿ, ಸಬಳೂರು ಶಾಲಾ ಶಿಕ್ಷಕ https://www.vijayavani.net/dignitaries-pay-tribute-to-dr-d-heggade https://www.vijayavani.net/falguni-building-security-room-inaugurated

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net