ದೀಪಾವಳಿ ಪಾಡ್ಯಕ್ಕೆ ಎಮ್ಮೆಗಳ ಮೆರವಣಿಗೆ

Untitled design(7)
ನಂ.10 ಮುದ್ದಾಪುರ ಗ್ರಾಮದಲ್ಲಿ ದೀಪಾವಳಿ ಪಾಡ್ಯ ನಿಮಿತ್ತ ಎಮ್ಮೆಗಳ ಮೆರವಣಿಗೆ ನಡೆಯಿತು.
Published on

ಕಂಪ್ಲಿ: ದೀಪಾವಳಿ ಪಾಡ್ಯ ನಿಮಿತ್ತ ನಂ.10 ಮುದ್ದಾಪುರದಲ್ಲಿ ಬುಧವಾರ ಎಮ್ಮೆಗಳ ಮೆರವಣಿಗೆ, ಪಾಂಡವರಿಗೆ ಚೆಲ್ಲು ಒಡೆಸುವ ಗೌಳಿ ಸಂಪ್ರದಾಯದ ಕಾರ್ಯಕ್ರಮಗಳು ನಡೆದವು.

ಅಲಂಕರಿಸಿದ ಎಮ್ಮೆಗಳನ್ನು ಗ್ರಾಮದ ಗೌಳಿಹಟ್ಟಿ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಂದು ಪಟ್ಟಣದ ಮಾರೆಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು. ಗೌಳಿಗರ ಮನೆಗಳ ಮುಂದೆ ಪ್ರತಿಷ್ಠಾಪಿಸಿದ್ದ ಪಾಂಡವರಿಗೆ ಮುಂಗಾಲು ಬಾಗಿಸಿ ಚೆಲ್ಲು ಒಡೆದು ಗೌರವ ಸೂಚಿಸಿದವು. ಎಮ್ಮೆಗಳಿಗೆ ರೋಗ ರುಜಿನಿ ಬಾರದಿರಲು ಸಂಕಲ್ಪಿಸಿ ಕಿಚ್ಚು (ಸುಡುವ ಹುಲ್ಲಿನ ಮೇಲೆ ಹಾರಿ ಹಾದು ಹೋಗುವುದು) ಹಾಯಿಸಿ ನಂತರ ಮೇಯಲು ಬಿಡಲಾಯಿತು. ಬದುಕಿಗೆ ಆಸರೆ ನೀಡಿದ ಎಮ್ಮೆಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ ಪಾಂಡವರಿಗೆ ಗೌರವ ಸೂಚಿಸುವುದು ಗೌಳಿಗರ ಸಂಪ್ರದಾಯವಾಗಿದೆ ಎಂದು ಗೌಳಿ ಸಮುದಾಯದ ಮಾಜಿ ಅಧ್ಯಕ್ಷ ಗೌಳೇರ ಶೇಖರಪ್ಪ, ನಂ.10ಮುದ್ದಾಪುರದ ಜಿ.ಕೆ.ರಾಚಪ್ಪ, ಸತ್ಯಪ್ಪ ಗೌಳಿ, ಜಿ.ಬಿ.ರಾಚಪ್ಪ, ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net