

ಬೈಂದೂರು: ದೀಪಾವಳಿಯು ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಮಹತ್ವವನ್ನು ಸಾರುವ ಹಬ್ಬವಾಗಿದೆ. ಜಾತಿ, ಮತದ ಭೇದ ಭಾವವಿಲ್ಲದೆ ಎಲ್ಲರೂ ಒಂದೇ ಎಂಬ ಮನೋಭಾವದಿಂದ ದೀಪಾವಳಿ ಹಬ್ಬ ಆಚರಿಸುತ್ತೇವೆ. ಈ ಬೆಳಕಿನ ಹಬ್ಬ ಸರ್ವರ ಬಾಳಿಗೆ ವಿಜಯದ ಸಂಕೇತವಾಗಲಿ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಶಿಸಿದರು.
ಬೈಂದೂರಿನ ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ನಡೆದ ದೀಪಾವಳಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ರಾಜು ಪೂಜಾರಿ ಮಾತನಾಡಿ, ದೀಪಾವಳಿಯು ಅಂಧಕಾರದ ಮೇಲೆ ಬೆಳಕಿನ ಜಯವನ್ನು ಸೂಚಿಸುವ ಹಬ್ಬವಾಗಿದ್ದು, ನಾವು ಜೀವನದಲ್ಲಿ ಪರಸ್ಪರ ಪ್ರೀತಿ ಮತ್ತು ಸಹಕಾರದ ಬೆಳಕನ್ನು ಹರಡುವ ಮನೋಭಾವದೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ರೆ.ಫಾ.ಫಿಲಿಪ್ ನೆಲ್ಲಿವಿಳಾ ಪ್ರಾಸ್ತಾವಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.