ಬೆಳಕಿನ ಹಬ್ಬಕ್ಕೆ ಪಟಾಕಿ ಖರೀದಿ ಜೋರು ಕಿಲೋಮೀಟರ್‌ಗಟ್ಟಲೆ ಅಂಗಡಿ ಮಳಿಗೆ ಆರಂಭ ದೂರದೂರುಗಳಿಂದ ಗ್ರಾಹಕರ ಆಗಮನ

18 ank news and photos 01
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ದೀಪಾವಳಿ ಸಮೀಪಸುತ್ತಿರುವುದರಿಂದ ಪಟಾಕಿ ಖರೀದಿ ಜೋರಾಗಿದ್ದು, ರಾಷ್ಟ್ರೀಯ ಹೆದ್ದಾರಿ ಹೊಸೂರು-ಬೆಂಗಳೂರು ಮುಖ್ಯರಸ್ತೆಯ ಬೊಮ್ಮಸಂದ್ರದಿಂದ ಅತ್ತಿಬೆಲೆ ಗಡಿವರೆಗೆ ನೂರಾರು ಪಟಾಕಿ ಮಳಿಗೆಗಳು ರಾರಾಜಿಸುತ್ತಿವೆ.
ತಮಿಳುನಾಡಿನ ಶಿವಕಾಶಿಯಿಂದ ಪಟಾಕಿಗಳನ್ನು ತಂದು ಗೋದಾಮುಗಳಲ್ಲಿ ಶೇಖರಣೆ ಮಾಡಿರುವ ವ್ಯಾಪಾರಸ್ಥರು, ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಾಗಿ ಲಕ ಹಾಕಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ವಿವಿಧ ಭಾಗಗಳಿಂದ ಸಾವಿರಾರು ಜನ ಆಗಮಿಸುತ್ತಿದ್ದು, ಖರೀದಿಗೆ ಮುಂದಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ತಮಿಳುನಾಡಿಗೆ ಪಟಾಕಿ ಖರೀದಿಸಲು ಹೋಗುತ್ತಿದ್ದ ವ್ಯಾಪಾರಿಗಳು ಈ ಬಾರಿ ತಾಲೂಕಿನ ಗಡಿಯಲ್ಲೇ ವಹಿವಾಟು ನಡೆಸುತ್ತಿದ್ದಾರೆ.
ಅಂಗಡಿಗಳಲ್ಲೂ ಪುನೀತ್ ರಾಜಕುಮಾರ್: ಬಹುತೇಕ ಪಟಾಕಿ ಮಳಿಗೆಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ರಾರಾಜಿಸುತ್ತಿರುವುದು ವಿಶೇಷವಾಗಿದೆ.


ನೆರಳೂರು ಬಳಿ ಕಳೆದ ಬಾರಿ ಪಟಾಕಿ ಖರೀದಿ ಮಾಡಿದ್ದೇವೆ. ಈ ಬಾರಿಯೂ ಖರೀದಿಸಲು ಆಗಮಿಸಿದ್ದು ಉತ್ತಮ ಡಿಸ್ಕೌಂಟ್ ಈ ಭಾಗದಲ್ಲಿ ನೀಡುತ್ತಾರೆ. ಅದಕ್ಕಾಗಿ ಕುಟುಂಬ ಸಮೇತ ಗದಗದಿಂದ ಆಗಮಿಸಿದ್ದೇವೆ.
ಲೀಲಾವತಿ, ಪಟಾಕಿ ಖರೀದಿದಾರರು


ವಿವಿಧ ಕಂಪನಿಗಳ ಪಟಾಕಿಗಳನ್ನು ಶೇಖರಿಸಿದ್ದು, ಹಬ್ಬ ಸಮೀಪಿಸುತ್ತಿರುವುದರಿಂದ ಹೆಚ್ಚಿನ ಗ್ರಾಹಕರು ಆಗಮಿಸುತ್ತಿದ್ದಾರೆ. ವರ್ಷ ಪೂರ್ತಿ ಪಟಾಕಿ ವ್ಯಾಪಾರ ನಡೆಯುತ್ತದೆ. ಆದರೂ ದೀಪಾವಳಿ ನಿಮಿತ್ತ ಹೆಚ್ಚಿನ ಶೇಖರಣೆ ಮಾಡಿದ್ದೇವೆ.
ರಾಮಸ್ವಾಮಿ, ಪಟಾಕಿ ವ್ಯಾಪಾರಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net