ಬೆಲೆ ಏರಿಕೆ ನಡುವೆ ಸಂಭ್ರಮದ ದೀಪಾವಳಿ ಆಚರಣೆ ವ್ಯಾಪಾರ ಮಂದ : 69 ಮಳಿಗೆಗಳ ಸ್ಥಾಪನೆ ಜಿಲ್ಲಾಡಳಿತದಿಂದ ಒಂದು ವಾರ ತಾತ್ಕಾಲಿಕ ಅನುಮತಿ

raichur
raichur
Published on

ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಾರ್ವಜನಿಕರಲ್ಲಿ ಕಳೆ ಗುಂದಿದ್ದು, ಪಟಾಕಿ ಸಿಡಿಸಿ ಹಬ್ಬವನ್ನು ಜನರು ಭರ್ಜರಿ ಆಚರಣೆ ನಡೆಸಿದ್ದಾರೆ.ನಗರದ ಬಸವೇಶ್ವರ ವೃತ್ತದ ವಾಲ್ಕಟ್ ಮೈದಾನದಲ್ಲಿ ಪಟಾಕಿಗಳ ಮಳಿಗೆ ಹಾಕಲಾಗಿದೆ. ಅ.18 ರಿಂದ ಅ.24 ರವರೆಗೆ ಮಾತ್ರ ತಾತ್ಕಾಲಿಕವಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಸಿರು ಪಟಾಕಿ ಮಾರಾಟ ಮಾಡಬೇಕೆಂಬ ಸೂಚನೆಯೊಂದಿಗೆ ಜಿಲ್ಲಾಧ್ಯಂತ ಈ ಬಾರಿ ಒಟ್ಟು 69 ಮಳಿಗೆಗಳು ಹಾಕಲಾಗಿದ್ದು, ಈ ಪೈಕಿ ರಾಯಚೂರು 35, ಶಕ್ತಿನಗರ 2 ,ಲಿಂಗಸುಗೂರು 7,ಮಾನ್ವಿ 3, ಸಿಂಧನೂರು 8,ತುರ್ವಿಹಾಳ 1, ದೇವದುರ್ಗ 1,ಮಸ್ಕಿ 2 ಮುದಗಲ್ 4, ಸಿರವಾರ 5 ಹಾಗೂ ಅರಕೇರಾ 2 ಸೇರಿ ಒಟ್ಟು 69 ಮಳಿಗೆಗಳನ್ನು ಹಾಕಲಾಗಿದ್ದು, ಜಿಲ್ಲಾಡಳಿತ, ಪರಿಸರ ಮಾಲಿನ್ಯ ಇಲಾಖೆ ,ಕಂದಾಯ ಇಲಾಖೆ, ಅಗ್ನಿ ಶಾಮಕ ಠಾಣೆ,ಮಹಾನಗರ ಪಾಲಿಕೆಯಿಂದ ಅನುಮತಿ ಕಲ್ಪಿಸಿದೆ. ಕಳೆದ ವರ್ಷ 46 ಮಳಿಗೆಗಳಿಗೆ ನೀಡಲಾಗಿದ್ದ ಅನುಮತಿಯನ್ನು ಈ ಬಾರಿ ಹೆಚ್ಚಿಸಲಾಗಿದೆ. ಮೈದಾನದ ಒಂದು ಭಾಗದಲ್ಲಿ ಸುರಕ್ಷತ ಕ್ರಮವಹಿಸಿ ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಗೆ 50 ಪೀಟ್ ಅಂತರವಿಟ್ಟು ಮಳಿಗೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಮಳಿಗೆ ಮುಂಭಾಗ ನೀರಿನ ಡ್ರಮ್ಗಳು ಇರಿಸಲಾಗಿದೆ.

ಅನುಮತಿ ಖರ್ಚು ವೆಚ್ಚ

ಮೈದಾನದಲ್ಲಿ ಮಳಿಗೆ ಹಾಕಲು ಅಗ್ನಿಶಾಮಕ ಇಲಾಖೆಗೆ 6,400 ರೂ., ಪಾಲಿಕೆಗೆ 2000 ರೂ., ಹಾಗೂ ಜಿಲ್ಲಾಡಳಿತಕ್ಕೆ 600 ರೂ. ಶುಲ್ಕ ಪಾವತಿಸಬೇಕು. ಅಲ್ಲದೇ ಮಳಿಗೆ ನಿರ್ಮಾಣಕ್ಕೆ 17,000 ರೂ. ನೀಡಲಾಗಿದೆ. ಆದರೆ ಈ ಬಾರಿ ಹಬ್ಬವು ತಿಂಗಳ ಮಧ್ಯದಲ್ಲಿ ಬಂದಿರುವುದರಿಂದ ವ್ಯಾಪಾರ ಮಂದವಾಗಿದೆ. ಪ್ರತಿ ಮಳಿಗೆಯಲ್ಲೂ 5,000 ರೂ.ದಿಂದ 20,000 ರೂ.ವರೆಗೂ ಪಟಾಕಿಗಳಿವೆ. ಲಕ್ಷ್ಮಿ ಪಟಾಕಿ, ಆಟಂ ಬಾಂಬ್, ನಕ್ಷತ್ರ ಕಡ್ಡಿ, ಭೂಚಕ್ರ, ಸ್ಕೈ ಶಾಟ್, ಸ್ಕೈ ರೈಡರ್ ಸೇರಿದಂತೆ ನಾನಾ ರೀತಿಯ 200 ಕ್ಕೂ ಹೆಚ್ಚು ರೀತಿಯ ಪಟಾಕಿಗಳು ಸಾಮಾನ್ಯವಾಗಿವೆ.

ಗಮನ ಸೆಳೆದ ಪಟಾಕಿಗಳು

ಈ ಬಾರಿ ಜನರನ್ನು ಸೆಳೆಯಲು ಮಳಿಗೆಗಳಿಗೆ ವಿವಿಧ ಆಕರ್ಷಕ ಹೆಸರುಗಳನ್ನು ಇಡಲಾಗಿದೆ. ಹಿಂದೂಗಳನ್ನು ಆಕರ್ಷಣೆ ಮಾಡಲು ವಿವಿಧ ದೇವರುಗಳಿರುವ ಹೆಸರು ಮೂಲಕ ಜನರನ್ನು ಸೆಳೆಯುತ್ತಿದ್ದರೆ. ಮಾರಾಟ ಪ್ರಾರಂಭವಾದ ದಿನದಿಂದಲೂ ಮಂದವಾಗಿ ಜನರು ಬರುತ್ತಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಪಟಾಕಿಗಳದ 240 ಷಟ್ಸ್,120 ಷಟ್ಸ್, 10 ಕೆ ವಾಲಾ ಸೇರಿದಂತೆ ನಾನಾತರರ ದೊಡ್ಡ ಮಟ್ಟದ ಪಟಾಕಿಗಳನ್ನು ಜನರು ಖರೀದಿಸದೆ ಮಕ್ಕಳು ಆಡುವ ಪಟಾಕಿಗಳನ್ನು ಖರೀದಿಸಿದ್ದರಿಂದ ಮಾರಾಟಗಾರರಿಗೆ ಸಂಕಷ್ಟ ಎದುರಾಗಿದೆ.

ಕಳೆದ ವರ್ಷಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿಲ್ಲ. ಆಕಾಲಿಕ ಮಳೆಯಿಂದ ರೈತರಿಗೆ ನಷ್ಟ ಅನುಭವಿಸಿರುವುದರಿಂದ ಸಮಸ್ಯೆ ಆಗಿದೆ. ರೈತರಿಗೆ ಬೆಳೆ ಚನ್ನಾಗಿ ದೊರೆತರೆ ನಮಗೆ ವ್ಯಾಪಾರ ಚನ್ನಾಗಿ ಆಗುತ್ತದೆ. ಪಟಾಕಿ ಖರೀದಿಸುವವರಿಗೆ ಸುರಕ್ಷಿತವಾಗಿ ಪಟಾಕಿಗಳನ್ನು ಸಿಡಿಸುವಂತೆ ತಿಳಿಸಲಾಗುತ್ತದೆ. ಬಸರೆಡ್ಡಿ ಪಟಾಕಿ ಮಾರಾಟಗಾರ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net