ದೀಪಾವಳಿ ಜಾಗೃತಿ ಸಭೆ ಇಂದು

27. HBH. 1 kotreesh Settar
ಕೊಟ್ರೇಶ್ ಶೆಟ್ಟರ್
Published on

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಅ.28ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಪಡೆದವರಿಗೆ ಗುರುತಿನ ಚೀಟಿ, ಅರ್ಥಪೂರ್ಣ ದೀಪಾವಳಿ ಆಚರಿಸುವುದು ಹೇಗೆ ಎನ್ನುವ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿಂದು ಜಾಗರಣ ಸಮಿತಿ ರಾಜ್ಯ ಸಮನ್ವಯ ಸದಸ್ಯ ಗುರುಪ್ರಸಾದ್ ಗೌಡರ್, ರಾಜು ದರಿಯಣ್ಣನವರ್ ಉಪನ್ಯಾಸ ನೀಡಲಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿ ಹೊಸಪೇಟೆಯ ಶ್ರೀನಿವಾಸ ರೆಡ್ಡಿ, ರಾಷ್ಟ್ರ ಕಮಿಟಿ ಸದಸ್ಯ ವಿರೂಪಾಕ್ಷಪ್ಪ ಕೋರಿ, ರಾಜ್ಯ ಕಮಿಟಿ ಸದಸ್ಯರಾಗಿ ಬಳ್ಳಾರಿಯ ಕರೆಗೌಡ, ಶಂಕರ್ ಅಂಗಡಿ, ಅನುರಾಧ ಚಂದ್ರಶೇಖರ್ ಆಯ್ಕೆಯಾಗಿದ್ದು, ತಾಲೂಕು ಘಟಕದಿಂದ ಸನ್ಮಾನಿಸಲಾಗುವುದು ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net