ಜಿಪಂ ನೂತನ ಸಿಒಇ ದಿವಾಕರ್ ಅಧಿಕಾರ ಸ್ವೀಕಾರ

IMG-20221027-WA009555
Published on

ಜಿಪಂ ನೂತನ ಸಿಒಇ ದಿವಾಕರ್ ಅಧಿಕಾರ ಸ್ವೀಕಾರ

ಚಿತ್ರದುರ್ಗ: ಜಿಪಂ ನೂತನ ಸಿಇಒ ಆಗಿ ಎಂ.ಎಸ್.ದಿವಾಕರ್ ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಸಿಇಒ ಡಾ.ಕೆ.ನಂದಿನಿದೇವಿ ಅವರು ದಿವಾಕರ್ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು.

ದಾವಣಗೆರೆ ಜಿಲ್ಲೆ ಗಂಗನಕಟ್ಟೆ ಗ್ರಾಮದ ದಿವಾಕರ್ ಅವರು ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಕೃಷಿ ಪದವಿ ಬಂಗಾರದ ಪದಕ ಪಡೆ ದವರು.ಅಲ್ಲಿಯೇ ಎಂಎಸ್ ಸ್ನಾತಕೋತ್ತರ ಪದವಿಯ ಬಳಿಕ ಸಾಗರದ ಕೃಷಿ ಇಲಾಖೆಯ ಲ್ಲಿ ಸಹಾಯ ಕ ನಿರ್ದೇಶಕರಾಗಿ 2002 ರಿಂದ 2006ರವರೆಗೆ ಸೇವೆ ಸಲ್ಲಿಸಿದ್ದರು.

ಆನಂತರದಲ್ಲಿ ಬಳ್ಳಾರಿಯಲ್ಲಿ ಇಲಾಖೆ ಉಪ ನಿರ್ದೇಶಕರಾಗಿ 5 ವರ್ಷ ಹಾಗೂ ಬೆಳಗಾವಿಯಲ್ಲಿ 5 ವರ್ಷ ಜಂಟಿ ನಿರ್ದೇಶಕರಾಗಿ ಹಾ ಗೂ ಬೆಂಗಳೂರಲ್ಲಿ ಇಲಾಖೆ ಹೆಚ್ಚುವರಿ ನಿರ್ದೇಶಕರಾಗಿ 4 ವರ್ಷ ಸೇವೆ ಸಲ್ಲಿಸಿದ್ದು,ಸಿಇಒ ಆಗಿ ಚಿತ್ರದುರ್ಗ ಜಿಪಂಕ್ಕೆ ಮೊದಲ ಬಾ ರಿಗೆ ನೇಮಕವಾಗಿದ್ದಾರೆ. ಜಿಪಂ ಸಿಪಿಒ ಗಾಯತ್ರಿ ಮತ್ತಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net