ಮನಸೂರೆಗೊಂಡ ದಿವ್ಯಾ ರಾಮಚಂದ್ರ ಗಾಯನ

2
Published on

ಕೆ.ಆರ್.ಸಾಗರ: ಬೃಂದಾವನದಲ್ಲಿ ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೊದಲನೇ ದಿನ ಸಂತೋಷ, ವೆಂಕಿ ಹಾಗೂ ಗಾಯಕಿ ದಿವ್ಯಾ ರಾಮಚಂದ್ರ ಅವರ ಸಂಗೀತ ಸಂಜೆ ಕಾರ್ಯಕ್ರಮ ನೆರದಿದ್ದ ಸಾವಿರಾರು ಪ್ರವಾಸಿಗರ ಮನಸೂರೆಗೊಂಡಿತು. ಶಾಸಕ ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಾ.ನೀ.ನಿಗಮದ ಮುಖ್ಯ ಎಂಜಿನಿಯರ್ ವೆಂಕಟೇಶ್, ಅಧೀಕ್ಷಕ ಎಂಜಿನಿಯರ್ ರಘುರಾಮ್, ಕಾರ್ಯಪಾಲಕ ಎಂಜಿನಿಯರ್ ಜಯಂತ್, ಎ.ಇ.ಇ. ಫಾರೂಖ್ ಅಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net