ಪೊನ್ನೇಟಿ ಕುಟುಂಬಸ್ಥರಿಂದ ದೈವ ಕೋಲ

Divya Kola from the Ponnetti family
Published on

ಮಡಿಕೇರಿ:

ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಪೊನ್ನೇಟಿ ಕುಟುಂಬಸ್ಥರ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ದೈವಗಳ ಕೋಲ ಮಂಗಳವಾರ (ಏ.೩೦) ಮತ್ತು ಬುಧವಾರ (ಮೇ ೧) ಶ್ರದ್ಧಾ ಭಕ್ತಿಯಿಂದ ನಡೆಯಿತು. ಕೊಪ್ಪ ಪೊನ್ನೇಟಿ ಹಟ್ಟಿಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂದಣ ಮೂರ್ತಿ, ಕೋರ್ತಿ, ಪುಟ್ಟ ಕೋರ್ತಿ, ಅಂಗಾರ, ಭೂಮಿ ಗುಳಿಗ, ರಾವು ಗುಳಿಗ ಹಾಗೂ ಶ್ರೀ ಕರಿ ಚಾಮುಂಡಿ ದೈವಗಳ ಕೋಲ ಗಮನ ಸೆಳೆಯಿತು. ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆ ತನಕ ನಿರಂತರವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಬಂಧುಗಳು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಗಳ ಕೋಲವನ್ನು ಕಣ್ತುಂಬಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net