ಆನೇಕಲ್​ನಲ್ಲಿ ವಿಚ್ಛೇದನಕ್ಕೆ ಬಂದವರು ಮತ್ತೆ ಒಂದಾದರು!

20 04 2025_BGR RURAL_PAGE_5A
ಆನೇಕಲ್​ನ ಹಿರಿಯ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಪರಸ್ಪರ ಹಾರ ಹಾಕಿ ಮತ್ತೆ ಒಂದಾದರು. ಕಾನೂನು ಸೇವಾ ಪ್ರಾಧಿಕಾರದ ಹಿರಿಯ ವಕೀಲ ವಿ.ಕೃಷ್ಣಪ್ಪ ಮತ್ತು ಎಜಿ.ರಾಜು ಇದ್ದರು.
Published on

ಆನೇಕಲ್​ : ಆನೇಕಲ್​ನ ಹಿರಿಯ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಯನ್ನು ಕಾನೂನು ಸೇವಾ ಪ್ರಾಧಿಕಾರದ ಹಿರಿಯ ವಕೀಲ ವಿ.ಕೃಷ್ಣಪ್ಪ ಮತ್ತು ಎಜಿ.ರಾಜು ಮತ್ತೆ ಒಂದು ಮಾಡಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯೊಂದಿಗೆ ಸಮಾಲೋಚಿಸಿದ ವಕೀಲರು, ಪರಸ್ಪರ ಹೊಂದಾಣಿಕೆಯಿಂದ ಹೋಗಲು ಅನುವು ಮಾಡಿದರು. ಇಬ್ಬರಲ್ಲಿ ಹೊಂದಾಣಿಕೆ ಇಲ್ಲದೆ ನ್ಯಾಯಾಲಯದಲ್ಲಿ ಕೆಲವು ವರ್ಷ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ವಕೀಲರು ಅವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಹೇಗೆ ನೋಡು ಬೇಕು, ಸಣ್ಣ&ಸಣ್ಣ ಸಮಸ್ಯೆಗಳನ್ನು ನ್ಯಾಯಾಲಯದವರೆಗೂ ತರದೆ ಕುಟುಂಬದಲ್ಲಿಯೇ ಹೇಗೆ ಬಗೆಹರಿಸಿಕೊಳ್ಳಬೇಕು ಎಂಬ ಬಗ್ಗೆ ತಿಳಿ ಹೇಳಿದರು. ನಮ್ಮ ಹಿರಿಯರು ಹೇಗೆ ಗೌರವ, ಪ್ರೀತಿ ವಿಶ್ವಾಸದಿಂದ ಇರುತ್ತಿದ್ದರು. ಇತ್ತೀಚೆಗೆ ವ್ಯಕ್ತಿ ಗೌರವಕ್ಕಿಂತ ಸ್ವ&ಪ್ರತಿಷ್ಠೆ ಹೆಚ್ಚಾಗಿದೆ ಎಂದು ವಿ.ಕೃಷ್ಣಪ್ಪ ಬುದ್ಧಿವಾದ ಹೇಳಿ ಇಬ್ಬರನ್ನು ಒಂದು ಮಾಡುವಲ್ಲಿ ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net