ವಿಚ್ಛೇದನ ಅರ್ಜಿ ಹಿಂಪಡೆಯುವೆ - ಕೆ.ಕಲ್ಯಾಣ ಪತ್ನಿ ಅಶ್ವಿನಿ

kalyan
Published on

ಬೆಳಗಾವಿ: ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದು ಪತಿಯೊಂದಿಗೆ ಜೀವನ ನಡೆಸುತ್ತೇನೆ ಎಂದು ಗೀತ ರಚನೆಕಾರ ಕೆ.ಕಲ್ಯಾಣ ಅವರ ಪತ್ನಿ ಅಶ್ವಿನಿ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಾಣಕ್ಕೆ ಕುತ್ತು ಎಂದು ಹೇಳಿ ಎಲ್ಲ ಆಸ್ತಿಯನ್ನು ಬರೆಸಿಕೊಂಡರು. ಪ್ರತಿ ಪೂಜೆಗೆ ಹಣ ಕೊಡ್ತಿದ್ವಿ. ಅದರೆ, ನಾವು ಹೋಗುತ್ತಿರಲಿಲ್ಲ. ಯಾವ ರೀತಿ ಪೂಜೆ ಮಾಡುತ್ತಿದ್ದರು ಎಂಬುದು ಗೊತ್ತಿರಲಿಲ್ಲ. ಬಂಧಿತ ಶಿವಾನಂದ ವಾಲಿ ಮೊದಲೇ ಪರಿಚಯ ಇದ್ದರು. ನಂತರ ಗಂಗಾ ಕುಲಕರ್ಣಿಯಿಂದ ಹೆಚ್ಚು ಪರಿಚಯವಾದರು. ಹಿಪ್ನಾಟೀಸ್‌ಂನಿಂದಾಗಿ ಈ ರೀತಿ ನಮ್ಮ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ.

ಎಲ್ಲವನ್ನೂ ಸರಿಪಡಿಸಿದ ಬೆಳಗಾವಿ ಪೊಲೀಸರಿಗೆ ಧನ್ಯವಾದ ತಿಳಿಸಿದರೂ ಕಡಿಮೆ. ಶೀಘ್ರದಲ್ಲಿ ಕೆ. ಕಲ್ಯಾಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net