ಅರಸೀಕೆರೆ : ಎರಡನೇ ತ್ರೈಮಾಸಿಕ ಅವಧಿಯಲ್ಲಿ ಅರಸೀಕೆರೆ ಭಾರತೀಯ ಜೀವ ವಿಮಾ ನಿಗಮ ಶಾಖೆ ವಿಭಾಗ ಮಟ್ಟದಲ್ಲೂ ಹಾಗೂ ವಲಯ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದ ಪ್ರಯುಕ್ತ ಶಾಖೆಯ ಅಧಿಕಾರಿ ವರ್ಗದವರನ್ನು ಮತ್ತು ಜೀವ ವಿಮಾ ನಿಗಮದ ಪ್ರತಿನಿಧಿಗಳನ್ನು ಮೈಸೂರು ಹಿರಿಯ ವಿಭಾಗಾಧಿಕಾರಿ ಎಂ.ಕೃಷ್ಣವೇಣಿ ಅವರು ಸನ್ಮಾನಿಸಿದರು.
ನಂತರ ಮಾತನಾಡಿದ ಅವರು, ಅರಸೀಕೆರೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯ ಮೊದಲ ಪದದಿಂದ ಆರಂಭವಾಗುತ್ತದೆ. ಅದರಂತೆ ವಿಭಾಗ ಹಾಗೂ ವಲಯ ಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಇಲ್ಲಿನ ಸಿಬ್ಬಂದಿ ಹಾಗೂ ಪ್ರತಿನಿಧಿ ಎಲ್ಲರಿಗೂ ಅಭಿನಂದನೆಗಳು. ಇದೇ ರೀತಿ ಮುಂಬರುವ ದಿನಗಳಲ್ಲಿ ವಲಯ ಮಟ್ಟದ ಎಲ್ಲ ಗುರಿಯಲ್ಲೂ ಪ್ರಥಮ ಸ್ಥಾನ ಬರುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕ ಮಾರುತಿ ಮಾತನಾಡಿ, ನಮ್ಮ ಶಾಖೆಯ ಯಶಸ್ಸಿಗೆ ಕಾರಣೀಭೂತರಾದ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪ್ರತಿನಿಧಿಗಳಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲೂ ಇದೇ ರೀತಿ ಕೆಲಸ ಮಾಡುವಂತಹ ಪ್ರೋತ್ಸಾಹಿಸಿದರು. ಎಲ್‌ಐಸಿ ಮೈಸೂರು ಮಾರುಕಟ್ಟೆ ವ್ಯವಸ್ಥಾಪಕ ಶ್ರೀಕಾಂತ್ ಮಾತನಾಡಿದರು. ಉಪ ಶಾಖಾಧಿಕಾರಿ ಶ್ರೀನಿವಾಸ್ ಇತರರು ಇದ್ದರು.