ಸಂವಿಧಾನ ಉಳಿವಿಗಾಗಿ ಮೇ.೦೭ ರಂದು ವಿಭಾಗೀಯ ಮಟ್ಟದ ಪ್ರತಿಭಟನೆ

IMG-20250503-WA0041
Published on

ರಾಯಚೂರು ಸಂವಿಧಾನ ಉಳಿವಿಗಾಗಿ ಮತ್ತು ಕೇಂದ್ರ ರ‍್ಕಾರದ ಬೆಲೆ ಏರಿಕೆ ಖಂಡಿಸಿ ಮೇ.೦೭ ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಲಬುರಗಿ ವಿಭಾಗೀಯ ಮಟ್ಟದ ಪ್ರತಿಭಟನೆ ಆಯೋಜನೆ ಮಾಡಲಾಗಿದೆಂದು ಎಐಸಿಸಿ ಕರ‍್ಯರ‍್ಶಿ ಗೋಪಿನಾಥ ಪಳನಿಯಪ್ಪನ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ರ‍್ಕಾರ ಜನ‌ ಸಾಮಾನ್ಯರ ಮೇಲೆ ಜಿಎಸ್ ಟಿ ಮೂಲಕ ದಾಳಿ ಮಾಡುತ್ತಿದೆ.

ದೇಶದಲ್ಲಿ ಸಾಮಾಜಿಕ‌ ಸ್ವಾಸ್ಥ್ಯ ಹಾಳಾಗುತ್ತಿದೆ. ಸಂವಿಧಾನ ರಕ್ಷಣೆ ಮಾಡುವುದು ಇಂದಿನ ದಿನದಲ್ಲಿ ಅವಶ್ಯಕವಾಗಿದೆ. ಅದರಿಂದ  ಬೆಲೆ ಏರಿಕೆ ಹಾಗೂ ಸಂವಿಧಾನ ರಕ್ಷಣೆಗಾಗಿ  ಪ್ರತಿಭಟನಾ ಸಮಾವೇಶವನ್ನ ಹಮ್ಮಿಕೊಂಡಿದ್ದೇವೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕರ‍್ಜುನ ರ‍್ಗೆ, ಉಸ್ತುವಾರಿ ಕರ‍್ಯರ‍್ಶಿ ರಣದೀಪ್ ಸಿಂಗ್ ಸರ‍್ಜೆವಾಲ,  ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ ಎಂದರು.

ಈ ಸಂರ‍್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು,ಶಾಸಕ ಹಂಪನಗೌಡ ಬಾರ‍್ಲಿ, ಹಂಪಯ್ಯ ನಾಯಕ, ಬಸನಗೌಡ ದದ್ದಲ್, ಬಸನಗೌಡ ತರ‍್ವಿಹಾಳ, ಎಂಎಲ್ಸಿ ಬಸನಗೌಡ ಬಾರ‍್ಲಿ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net