ಶ್ರಮದ ವಿಭಜನೆ ಮನೆಯಿಂದ ಆರಂಭವಾಗಬೇಕು; ವಿಮರ್ಶಕಿ ಎಂ.ಎಸ್.ಆಶಾದೇವಿ ಪ್ರತಿಪಾದನೆ

womens
Published on

ಬೆಂಗಳೂರು: ಗಂಡು ಹೆಣ್ಣಿನ ಶ್ರಮದ ವಿಭಜನೆ ಪ್ರತಿ ಮನೆಯಿಂದ ಆರಂಭವಾಗಬೇಕು ಎಂದು ವಿಮರ್ಶಕಿ ಎಂ.ಎಸ್.ಆಶಾದೇವಿ ಪ್ರತಿಪಾದಿಸಿದ್ದಾರೆ.

ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಭಾನುವಾರ ಶಿವರಾಮ ಕಾರಂತ ವೇದಿಕೆ ಏರ್ಪಡಿಸಿದ ಮಹಿಳಾ ದಿನಾಚರಣೆಯಲ್ಲಿ ‘ಅವಳ ಅರಿವು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಹೆಣ್ಣು ಮನೆ ಕೆಲಸವನ್ನು ಅಗತ್ಯಕ್ಕಿಂತ ಜಾಸ್ತಿ ಮಾಡಬಾರದು. ಹೆಣ್ಣಿನ ಕೌಟುಂಬಿಕ ಜವಾಬ್ದಾರಿ , ಮಹತ್ವ ಅಲ್ಲಗಳೆಯುವಂತಿಲ್ಲ. ಆದರೆ, ಅದುವೇ ಎಲ್ಲವೂ ಅಲ್ಲ. ಹೆಣ್ಣು ಯಾವತ್ತೂ ಇಚ್ಚಾ ಶಕ್ತಿಯನ್ನು ಕಳೆದುಕೊಳ್ಳಬಾರದು. ಹೆಣ್ಣಿನ ಶಕ್ತಿ ಹೊರಗಡೆಯಿಂದ ಪಡೆಯಬೇಕಾಗಿಲ್ಲ. ಅದು ಸ್ವಯಂ ಅನಾವರಣ ಆಗಬೇಕಾಗಿದೆ. ಹೆಣ್ಣನ್ನು ದೇವತೆಗಳಂತೆ ನೋಡಿ, ಪೂಜೆ ಮಾಡುವ ಬದಲು ಮನುಷ್ಯರ ಹಾಗೇ ಸಮಾನವಾಗಿ ಗ್ರಹಿಸಬೇಕು. ಹೆಣ್ಣನ್ನು ಬಹು ಪಾತ್ರಗಳಿಂದ ಛಿದ್ರಗೊಳಿಸಲಾಗಿದ್ದು, ಹೆಣ್ಣಿಗೆ ನಾನು ಎಂದರೆ ಯಾರು ಎಂಬುದೇ ಗೊಂದಲಮಯವಾಗಿದೆ. ಆ ಅರಿವಿನ ನಿಜವಾದ ಪ್ರಯಾಣ ಅಗತ್ಯವಿದೆ ಎಂದು ಆಶಾದೇವಿ ವಿವರಿಸಿದರು.

ಸಮಾರಂಭದಲ್ಲಿ ವಿಮರ್ಶಕಿ ಎಲ್.ಜಿ.ಮೀರಾ, ಲೇಖಕಿ ಗೀತಾ ವಸಂತ, ವೇದಿಕೆಯ ಅಧ್ಯಕ್ಷೆ ದೀಪಾ ಫಡ್ಕೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net