ಅ.೧ರಿಂದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

v.t.vishmai
Published on

ಮಡಿಕೇರಿ: ಪ್ರಸಕ್ತ(೨೦೨೩-೨೪) ಸಾಲಿನ ಮೈಸೂರು ವಿಭಾಗಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆ ಅ.೧ ರಿಂದ ೪ ರವರೆಗೆ ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ನಡೆಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಕಿ ವಿಸ್ಮಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಿಲ್ಲಾ ಮಟ್ಟದ ಕ್ರೀಡಾ ಕೂಟ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಸ್ವರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ಗುಂಪುಗಳಿಗೆ ಮಾತ್ರ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಅರ್ಹರಿದ್ದಾರೆ. ಈ ಕುರಿತು ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ನಿಗದಿತ ಜಿಲ್ಲೆಯ ಕ್ರೀಡಾ ಕೇಂದ್ರ ಸ್ಥಳಗಳಲ್ಲಿ ಆಯಾಯ ಜಿಲ್ಲೆಯ ಕ್ರೀಡಾ ಅಧಿಕಾರಿಗಳು ನಿಗಧಿಪಡಿಸಿರುವ ಸಮಯ(ಕೆಳಗಿನಂತೆ)ಗಳಲ್ಲಿ ವರದಿ ಮಾಡಿಕೊಳ್ಳುವುದು. ತಪ್ಪಿದಲ್ಲಿ ಈ ಕ್ರೀಡಾಪಟುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.


ಅ.೧ ರಂದು ಬೆಳಗ್ಗೆ ೮ ಗಂಟೆಗೆ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ವಾಲಿಬಾಲ್, ಖೋ ಖೋ, ಕಬಡ್ಡಿ, ಫುಟ್ ಬಾಲ್ ಮತ್ತು ಅ.೨ ರಂದು ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಟೆನ್ನಿಸ್, ಈಜು ಸ್ಪರ್ಧೆಗಳು ನಡೆಯಲಿದೆ.


ಅ.೨ ರಂದು ಬೆಳಗ್ಗೆ ೮ ಗಂಟೆಗೆ ಮಂಗಳೂರು ಮಂಗಳ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಬಾಲ್ ಬ್ಯಾಡ್ ಮಿಂಟನ್, ಥ್ರೋಬಾಲ್, ಅ.೩ ರಂದು ಕುಸ್ತಿ, ಹ್ಯಾಂಡ್ ಬಾಲ್ ಮತ್ತು ಭಾರ ಎತ್ತುವುದು(ವೇಟ್‌ಲಿಫ್ಟಿಂಗ್), ಅ.೪ ರಂದು ಬಾಕ್ಸಿಂಗ್, ವುಷು, ಟೆಕ್ವೊಂಡೊ, ನೆಟ್ ಬಾಲ್, ಅ.೪ ರಂದು ಬೆಳಗ್ಗೆ ೮ ಗಂಟೆಗೆ ಕೊಡಗು ಜಿಲ್ಲೆಯ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಹಾಕಿ, ಯೋಗ ಹಾಗೂ ಜಿಮ್ನಾಸ್ಟಿಕ್(ಆಯ್ಕೆ) ಸ್ಪರ್ಧೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.


ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ವಿಭಾಗ ಮಟ್ಟದ ದಸರಾ ಕ್ರಿಡಾಕೂಟದಲ್ಲಿ ಭಾಗವಹಿಸುವ ಮೂಲಕ ದಸರಾ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಅನಂತರಾಮ್ ೯೪೪೮೯೮೪೭೨೯, ರವಿ ೭೯೮೯೪೯೫೪೯೪, ದೇವಣ್ಣ ೯೦೦೮೮೪೮೨೮೯ ಹಾಗೂ ವೆಂಕಟೇಶ್ ೯೮೪೪೩೨೬೦೦೭ ನ್ನು ಸಂಪರ್ಕಿಸಬಹುದು ಎಂದು ವಿಸ್ಮಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net