

ಮೈಸೂರು: ಕಾಲಘಟ್ಟದಲ್ಲಿ ಕಳೆದು ಹೋಯಿತೆಂದೇ ಭಾವಿಸಲಾಗಿದ್ದ, ಸಾವಿರ ವರ್ಷಗಳ ನಂತರ, ಮೂಲಭೂತ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳು ಈಗ ಮತ್ತೆ ಪ್ರತ್ಯಕ್ಷವಾಗಿವೆ. ಇದು ಐತಿಹಾಸಿಕವಾದ, ಅವಿಸ್ಮರಣೀಯವಾದ ಕ್ಷಣ. ಲಿಂಗಗಳ ರೂಪದಲ್ಲಿ ಮಾಡಲಾದ ಈ ದಿವ್ಯ ಅವಶೇಷಗಳನ್ನು ಮೈಸೂರು ನಗರಿಗೆ ತರಲಾಗುವುದು.
ಮಂಗಳವಾರ (ಮೇ 6, 2025) ಸಂಜೆ 6 ಗಂಟೆಯಿಂದ ಜೆಎಸ್ಎಸ್ ಆಯುರ್ವೇದ ಕಾಲೇಜಿನ ಪಕ್ಕದಲ್ಲಿರುವ ಆರ್ಟ್ ಆಫ್ ಲಿವಿಂಗ್ನ ಆಶ್ರಮದಲ್ಲಿ ಭಕ್ತರು ಬಂದು ಸೋಮನಾಥನ ದಿವ್ಯ ದರ್ಶನ ಪಡೆದು, ದೈವೀ ಕಂಪನಗಳನ್ನು ಅನುಭವಿಸಬಹುದಾಗಿದೆ. ಪ್ರವೇಶವು ಸಾರ್ವಜನಿಕವಾಗಿ ತೆರೆಯಲಾಗಿದೆ. ದರ್ಶನದ ನಂತರ ಪ್ರಸಾದ ವಿನಿಯೋಗವನ್ನು ಮಾಡಲಾಗುವುದು.
ಸಾವಿರ ವರ್ಷಗಳ ನಂತರ ಈ ಅವಶೇಷಗಳು ಹೇಗೆ ಪತ್ತೆಯಾದವು? 1026 ಇಸಿವಿಯಲ್ಲಿ ಸೋಮನಾಥನ ದೇವಸ್ಥಾನವನ್ನು ಮಹ್ಮೂದ್ ಘಜ್ನಿಯು ಘೋರವಾಗಿ ನಾಶ ಮಾಡಿದ ನಂತರ ಈ ಅವಶೇಷಗಳನ್ನು ಕೆಲವು ಅಗ್ನಿಹೋತ್ರಿ ಬ್ರಾಹ್ಮಣರು ಮೂಲಭೂತ ಸೋಮನಾಥ ಲಿಂಗದ ಅವಶೇಷಗಳನ್ನು ತಮ್ಮೊಡನೆ ಹೊತ್ತುಕೊಂಡು ತಮಿಳುನಾಡಿಗೆ, ಅದನ್ನು ಸಾವಿರ ವರ್ಷಗಳವರೆಗೆ ಗೌಪ್ಯವಾಗಿ ರಕ್ಷಿಸಿದರು.
ಪೀಳಿಗೆಯಿಂದ ಪೀಳಿಗೆಯವರೆಗೆ ಅತ್ಯಂತ ಭಕ್ತಿಯಿಂದ ಪಂಡಿತ ಸೀತಾರಾಮ ಶಾಸ್ತ್ರಿಯವರ ಕುಟುಂಬವು ಸೋಮನಾಥನ ಪವಿತ್ರ ಅವಶೇಷಗಳನ್ನು ರಕ್ಷಿಸುತ್ತಾ ಬಂದರು. ಕಂಚಿ ಶಂಕರಾಚಾರ್ಯರು ಶಾಸ್ತ್ರಿಗಳಿಗೆ, "ಬೆಂಗಳೂರಿನಲ್ಲಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರ ಬಳಿಗೆ ಅದನ್ನು ತೆಗೆದುಕೊಂಡು ಹೋಗು. ಅವರು ನಿನಗೆ ಸಹಾಯ ಮಾಡುತ್ತಾರೆ" ಎಂದು ನಿರ್ದೇಶನವನ್ನು ನೀಡಿದರು. ಈಗ ಮೈಸೂರಿನ ನಿವಾಸಿಗಳು ಅನಂತ ಶಕ್ತಿಯನ್ನು, ಶುದ್ಧತೆಯನ್ನು, ಆಶೀರ್ವಾದದ ಬಲವನ್ನು ಹೊತ್ತಿರುವ ಈ ದಿವ್ಯ ಲಿಂಗಗಳ ದಿವ್ಯ ಸಾನ್ನಿಧ್ಯವನ್ನು ಅನುಭವಿಸಬಹುದು.