ವಿದ್ಯಾಭ್ಯಾಸ ಮಕ್ಕಳ ಭವಿಷ್ಯಕ್ಕೆ ನಾಂದಿ

dj dvg revankar
Published on

ದಾವಣಗೆರೆ: ವಿದ್ಯಾಭ್ಯಾಸ ಎನ್ನುವುದು ಅಂಕಪಟ್ಟಿ, ಪದವಿಗಳಿಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಬೇಕು ಎಂದು ದೈವಜ್ಞ ಸಮಾಜದ ಅಧ್ಯಕ್ಷ ದಿನಕರ ಶಂಕರ್ ಬೈಕೇರಿಕರ್ ಹೇಳಿದರು.

ವಿನೋಬಾನಗರದ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಭಾನುವಾರ ಪ್ರೇಮ ಅರುಣಾಚಲ ರೇವಣಕರ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ

2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಶಾರದಾ ಪುರಸ್ಕಾರ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಮುದಾಯದ ಸಂಸ್ಕಾರ, ಸಂಸ್ಕೃತಿ, ಸಭ್ಯತೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿದೆ.

ಸಾಮಾಜಿಕ ಕಾಳಜಿ, ಮಾನವೀಯ ಮೌಲ್ಯದೊಂದಿಗೆ ಕಾಯಕದಲ್ಲಿ ತೊಡಗಿದಾಗ ಅಭಿವೃದ್ಧಿ ಜತೆಯಲ್ಲಿ ಕುಟುಂಬಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದರು.

ರಾಜ್ಯದ 145 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಸನ್ಮಾನ ಮಾಡಲಾಯಿತು.

ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೈವಜ್ಞ ಸಮಾಜದ ಡಾ.ಸೋನಿಯಾ ದೇವದಾಸ್ ಪಾವಸ್ಕರ್, ಸೋನಿಯಾ ರಾಜೇಶ್ ಪವಾಸ್ಕರ್, ಸಹನಾ ಬೈರೇಶ್ವರ ಶೇಟ್ ಅವರನ್ನು ಸನ್ಮಾನಿಸಲಾಯಿತು.

ಗೌರಮ್ಮ ನರಹರಿ ಶೇಟ್ ಪ್ರತಿಷ್ಠಾನದ ಅಧ್ಯಕ್ಷ ನಲ್ಲೂರು ನಾಗರಾಜ್, ಪ್ರೇಮ ಅರುಣಾಚಲ ಎನ್. ರೇವಣಕರ್, ಕಸಾಪ ಮಂಗಳೂರು

ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣಕರ್, ದಾವಣಗೆರೆ ದೈವಜ್ಞ ಸಮಾಜದ ಅಧ್ಯಕ್ಷ ಪ್ರಶಾಂತ ವಿಶ್ವನಾಥ್ ವರ್ಣೇಕರ್,

ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಮನಾಥ ಪ್ರಭುದೇಸಾಯಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಪ್ರತಿಷ್ಠಾನದ ನಿರ್ದೇಶಕ ನಲ್ಲೂರು ಲಕ್ಷ್ಮಣ್ ರಾವ್ ಸ್ವಾಗತಿಸಿದರು. ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರೆ, ಅನಿತಾ ರಾಜೇಶ್ ಪಾವಸ್ಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net