ಸಾಲಬಾಧೆಗೆ ಮನನೊಂದು ದೀವಿಗಿಹಳ್ಳಿ ರೈತ ಆತ್ಮಹತ್ಯೆ

Crime Logo
Published on

ಹಿರೇಕೆರೂರ: ಸಾಲ ಬಾಧೆ ತಾಳಲಾರದೆ ಯುವ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೀವಿಗಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ರಘು ಸುರೇಶ ಇಂಗಳಗೊಂದಿ(26) ಮೃತ ರೈತ. 2.20 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಾಗಿ ಹಂಸಭಾವಿಯ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ 1.74 ಲಕ್ಷ ರೂ., ಟ್ರ್ಯಾಕ್ಟರ್ ಸಲುವಾಗಿ ಹಾವೇರಿಯ ಅಂದಾನಿ ಫೈನಾನ್ಸ್​ನಲ್ಲಿ 4 ಲಕ್ಷ ರೂ. ಸಾಲ ಮಾಡಿದ್ದನು. ಅದರಲ್ಲಿ 2.24 ಲಕ್ಷ ರೂ. ಸಾಲ ಬಾಕಿ ಇತ್ತು ಎನ್ನಲಾಗಿದೆ. ಈ ವರ್ಷ ಬೆಳೆ ಸರಿಯಾಗಿ ಬಾರದೆ ಸಾಲವನ್ನು ತೀರಿಸುವುದು ಹೇಗೆ ಎಂದು ಮನನೊಂದು ಜು. 26ರಂದು ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಜಮೀನಿನಲ್ಲಿ ವಿಷ ಸೇವಿಸಿದ್ದಾನೆ. ತಕ್ಷಣ ಈತನನ್ನು ಬ್ಯಾಡಗಿ ಆಸ್ಪತ್ರೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net