ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಸವಾರ ಸಾವು

Crime Logo
Published on

ನ್ಯಾಮತಿ: ಮುಂದೆ ಚಲಿಸುತ್ತಿದ್ದ ಬೈಕ್ ಹಿಂದಿಕ್ಕಲು ಹೋದ ದ್ವಿಚಕ್ರವಾಹನ ಆರುಂಡಿ-ನ್ಯಾಮತಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ಇಬ್ಬರು ಸವಾರರು ಗಾಯಗೊಂಡಿದ್ದಾರೆ.

ತಾಲೂಕಿನ ಕಂಕನಹಳ್ಳಿ ತಾಂಡಾದ ರವಿನಾಯ್ಕ (25) ಮೃತ ಸವಾರ. ಶಿವಮೊಗ್ಗದ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾನೆ. ಕೂಗನಹಳ್ಳಿ ಮಂಜುನಾಯ್ಕ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿಕಾರಿಪುರದ ವಿನೋದರಾಜ ಸಣ್ಣಪುಟ್ಟ ಗಾಯಗಳಾಗಿವೆ. ಹೊನ್ನಾಳಿಯಲ್ಲಿ ಸೋಮವಾರ ಕೆಲಸ ಮುಗಿಸಿಕೊಂಡು ನ್ಯಾಮತಿಗೆ ಬರುವಾಗ ಮಾರ್ಗ ಮಧ್ಯೆ ಪಟ್ಟಣದ ದೇವೇಂದ್ರಪ್ಪ ವೃತ್ತದ ಸಮೀಪ ಅಪಘಾತ ಸಂಭವಿಸಿದೆ.

ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಶಿಕಾರಿಪುರದ ವಿನೋದರಾಜ ಸಂಬಂಧಿಕರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net