ಶೇ.13 ಲಾಭಾಂಶ ವಿತರಣೆ

24blh10 ಮಲ್ಲಮ್ಮ ಬ್ಯಾಂಕ್
Published on

ಬೈಲಹೊಂಗಲ: ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೀರರಾಣಿ ಮಲ್ಲಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಸಕ್ತ ಸಾಲಿನಲ್ಲಿ 60.10 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.13 ಲಾಭಾಂಶ ವಿತರಿಸಲಿದೆ ಎಂದು ಉಪಾಧ್ಯಕ್ಷ ಎನ್.ಎಂ.ಕರೀಕಟ್ಟಿ ಹೇಳಿದರು.

ಸಹಕಾರಿಯ 33ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಹಕಾರಿಯ ಸಂಸ್ಥಾಪಕ ದಿ.ಡಾ.ಆರ್.ಬಿ.ಪಾಟೀಲ ಕಂಚಿನ ಮೂರ್ತಿ ಸಹಕಾರಿಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು. ನಿರ್ದೇಶಕ ಎಂ.ಬಿ.ಹಿರೇಮಠ ವರದಿ ಓದಿ, ಸಹಕಾರಿ 68.48 ಕೋಟಿ ರೂ. ದುಡಿಯುವ ಬಂಡವಾಳ, 60 ಕೋಟಿ ರೂ. ಠೇವಣಿ, 75.39 ಲಕ್ಷ ರೂ. ಷೇರು, 4.81 ಕೋಟಿ ರೂ. ನಿಧಿ, 18.50 ಕೋಟಿ ರೂ. ಗುಂತಾವಣೆ ಹೊಂದಿದ್ದು, 36.28 ಕೋಟಿ ರೂ. ಸಾಲ ವಿತರಿಸಿ 253.50 ಕೋಟಿ ರೂ. ವ್ಯವಹಾರ ಮಾಡಿದೆ ಎಂದರು.

ನಿರ್ದೇಶಕ ಆರ್.ಎಸ್.ರೊಟ್ಟಯ್ಯನವರ ಪ್ರಾಸ್ತಾವಿಕ ಮಾತನಾಡಿದರು. ಡಾ.ಆರ್.ಬಿ.ಪಾಟೀಲ ಸವಿನೆನಪಿಗಾಗಿ ಎಂಬಿಬಿಎಸ್, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಸಾಧಕರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ನಿವತ್ತ ಶಿಕ್ಷಕ ಎಂ.ಎಸ್.ಕಿರೋಜಿ ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶಕರಾದ ಆರ್.ಎಸ್.ರೊಟ್ಟಯ್ಯನವರ, ಎಸ್.ಎನ್.ಕುಲಕರ್ಣಿ, ಬಿ.ಆರ್.ಪಾಟೀಲ, ಬಸವರಾಜ ಬಳಿಗಾರ, ಪಾರ್ವತೆವ್ವ ಬಳಿಗಾರ, ಮಹಾದೇವಿ ಹಳ್ಳದಕೇರಿ, ಬಿ.ಎಸ್.ಪೂಜೇರ, ಆರ್.ಐ.ರಾಯೇಜಿ, ಬೈಲಹೊಂಗಲ ಶಂಕರ ಮಾಡಲಗಿ, ಡಿ.ಎಸ್.ಶೀಲವಂತರ, ಕೆ.ಎಂ.ಬಿರಾದಾರ, ರಾಜು ಭರಮಗೌಡ್ರ, ಕಿತ್ತೂರ ಶಾಖೆಯ ನಿರ್ದೇಶಕ ಉಮೇಶ ಮಾಡಿಕ, ಪ್ರಧಾನ ವ್ಯವಸ್ಥಾಪಕ ಎಸ್.ಬಿ. ಹುಡೇದ, ಸಿಬ್ಬಂದಿ ಎ.ಎಂ.ಮುರಗೋಡ, ಎಸ್.ಎನ್.ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net