ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದೆ ಭಾರತ

KA,PLI 01
ಕಂಪ್ಲಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಸಿದ್ದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಶಿಕ್ಷಕ ಸಾಹಿತಿ ಅಂಬಿಗರ ಮಂಜುನಾಥ, ಸ್ನಾತಕೋತ್ತರ ಪದವಿಯಲ್ಲಿ ಮೂರು ಚಿನ್ನದ ಪದಕಗಳಿಸಿದ ಎಮ್ಮಿಗನೂರಿನ ಎ.ಹಾಜಿರಾ ಬೀ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಗೌಸಿಯಾಬೇಗಮ್, ಪಿಐ ಕೆ.ಬಿ.ವಾಸುಕುಮಾರ, ತಾಪಂ ಇಓ ಆರ್.ಕೆ.ಶ್ರೀಕುಮಾರ, ಎಡಿಎ ಕೆ.ಎಸ್.ಮಲ್ಲನಗೌಡ, ಪುರಸಭೆ ಸಿಓ ಕೆ.ದುರುಗಣ್ಣ ಇತರರಿದ್ದರು.
Published on

ಕಂಪ್ಲಿ: ಭಾರತ ವಿಶ್ವಗುರುವಾಗಲು ಪ್ರತಿಯೊಬ್ಬರೂ ದೇಶದ ಪ್ರಗತಿಗಾಗಿ ಕರ್ತವ್ಯನಿರತರಾಗಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಮ್ ಹೇಳಿದರು.
ಇಲ್ಲಿನ ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ವೈವಿಧ್ಯತೆಯಲ್ಲಿ ಏಕತೆ ಸಾಧಿಸುವಲ್ಲಿ ಭಾರತ ಮುಂಚೂಣಿಯಲ್ಲಿದ್ದು ನಿರಂತರ ಸಾಗಬೇಕು. ತಾಲೂಕಿನ ಜನತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ತೋರುವಲ್ಲಿ ಮುಂದಾಗಬೇಕು ಎಂದರು.

ಶಿಕ್ಷಕ ಸಾಹಿತಿ ಅಂಬಿಗರ ಮಂಜುನಾಥ, ಸ್ನಾತಕೋತ್ತರ ಪದವಿಯಲ್ಲಿ ಮೂರು ಚಿನ್ನದ ಪದಕಗಳಿಸಿದ ಎಮ್ಮಿಗನೂರಿನ ಎ.ಹಾಜಿರಾ ಬೀ ಸೇರಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ಹಿರಿಯ ನಾಗರಿಕರನ್ನು, ವಿಜೇತ ಕ್ರೀಡಾಪಟುಗಳನ್ನು, ದಕ್ಷ ಅಧಿಕಾರಿಗಳನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪಿಐ ಕೆ.ಬಿ.ವಾಸುಕುಮಾರ, ತಾಪಂ ಇಓ ಆರ್.ಕೆ.ಶ್ರೀಕುಮಾರ, ಎಡಿಎ ಕೆ.ಎಸ್.ಮಲ್ಲನಗೌಡ, ಪುರಸಭೆ ಸಿಒ ಕೆ.ದುರುಗಣ್ಣ, ನೋಂದಣಾಧಿಕಾರಿ ಚಂದ್ರಕಾಂತ ಮಜ್ಜಿಗೆ, ಡಿಟಿ ಬಿ.ರವೀಂದ್ರಕುಮಾರ್, ಪುರಸಭೆ ಮಾಜಿ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಸದಸ್ಯರಾದ ಭಟ್ಟ ಪ್ರಸಾದ, ಸಿ.ಆರ್.ಹನುಮಂತ, ವೀರಾಂಜನೇಯಲು, ಲಡ್ಡು ಹೊನ್ನೂರವಲಿ, ಟಿ.ವಿ.ಸುದರ್ಶನರೆಡ್ಡಿ, ಆರ್.ಆಂಜಿನೇಯ, ಪ್ರಮುಖರಾದ ಕರೇಕಲ್ ಮನೋಹರ, ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಬಿ.ಜಾರ್ ಇತರರಿದ್ದರು.

ಧ್ವಜಾರೋಹಣ

ಕಸಾಪ ತಾಲೂಕು ಕಚೇರಿಯಲ್ಲಿ ಗೌರವ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ, ಕನ್ನಡ ಹಿತರಕ್ಷಕ ಸಂಘದಲ್ಲಿ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ವೀರಶೈವ ಸಂಘದಲ್ಲಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಅಲಿ ಪಬ್ಲಿಕ್ ಶಾಲೆಯಲ್ಲಿ ಪುರಸಭೆ ಸದಸ್ಯ ಎಂ.ಉಸ್ಮಾನ್, ವಾಸವಿ ಶಾಲೆಯಲ್ಲಿ ಅಧ್ಯಕ್ಷ ಡಿ.ಶ್ರೀಧರಶ್ರೇಷ್ಠಿ, ನಟರಾಜ ಕಲಾವಿಜಯ ಸಂಘದಲ್ಲಿ ಅಧ್ಯಕ್ಷ ಕಟ್ಟೆ ಮಾರೆಪ್ಪ ಧ್ವಜಾರೋಹಣ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net