ಶಾಂತಿ ಕದಡುವ ಪೋಸ್ಟ್: ಮಹಿಳೆಯ ಬಂಧನ

kodagu police
Published on

ಮಡಿಕೇರಿ: ಎರಡು ಜನಾಂಗಗಳ ನಡುವೆ ದ್ವೇಷ ಅಸೂಯೆ ಬೆಳೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತಹ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೊಡ್ಡಪುಲಿಕೋಟು ಗ್ರಾಮ ನಿವಾಸಿ ಕರವಂಡ ಸರಸು ಪೆಮ್ಮಯ್ಯ(೬೨) ಎಂಬುವವರನ್ನು ಜ.೩ ರಂದು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಈ ಸಂಬಂಧ ಆರೋಪಿಗೆ ಕಲಂ: ೧೯೬(೧), ೩೫೩(೨) ಬಿಎನ್‌ಸ್ ಆಕ್ಟ್ ಅಡಿಯಲ್ಲಿ ಗರಿಷ್ಟ ೩ ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net