ಧಾರವಾಡದ ಸ್ಪರ್ಧಾಳುಗಳು ಭಾರತಕ್ಕೆ ಪದಕ ತರಲಿ

6 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ಸರ್ಕಾರ ಯೋಗಾಸನವನ್ನು ಕ್ರೀಡೆ ಎಂದು ಪರಿಗಣಿಸಿದೆ. ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್‌ಗಳು ಯೋಗಾಸನ ಭಾರತ ಸಂಸ್ಥೆಯ ಅಧಿಕೃತ ಅಂಗಸ0ಸ್ಥೆಗಳಾಗಿವೆ. ಅವುಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ದೇಶಕ್ಕೆ ಪದಕಗಳನ್ನು ತಂದುಕೊಡಬೇಕು ಎಂದು ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಪರ್ಧೆ ಮತ್ತು ಜೀವನದಲ್ಲಿ ಸೋಲು- ಗೆಲುವು ಸಹಜ. ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ, ಮನೋಸ್ತೈರ್ಯ, ಸ್ವೀಕಾರ ಮನೋಭಾವ ಹೆಚ್ಚಾಗುತ್ತದೆ. ಸ್ಪರ್ಧೆಗೆ ಪ್ರತಿಭೆಯೊಂದೇ ಅರ್ಹತೆ. ನಿರ್ಣಾಯಕರು ಎಲ್ಲ ಸ್ಪರ್ಧಿಗಳನ್ನು ಸಮಾನತೆಯಿಂದ ನೋಡಬೇಕು. ಯೋಗಾಸನವು ಒಲಿಂಪಿಕ್ಸ್ಗೆ ಸೇರ್ಪಡೆಯಾಗಲಿದ್ದು, ಜಿಲ್ಲೆಯ ಸ್ಪರ್ಧಾಳುಗಳು ಭಾರತಕ್ಕೆ ಪದಕಗಳನ್ನು ತಂದು ಕೊಡುವ ಸಂಕಲ್ಪದಿ0ದ ಪ್ರಯತ್ನಿಸಿ ಎಂದರು.
ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ. ಪ್ರಕಾಶ ಪವಾಡಶೆಟ್ಟಿ, ಸುರೇಂದ್ರ ಭಾವಿಕಟ್ಟಿ, ರಮೇಶ ಸುಲಾಖೆ, ಎಂ.ಡಿ. ಪಾಟೀಲ, ಸವಿತಾ ಶಿಂಧೆ, ಇತರರಿದ್ದರು.
ಶಿವಕುಮಾರ ರುದ್ರಾಕ್ಷಿ, ಕುಮಾರ ಹಿರೇಮಠ, ಸರೋಜಿನಿ ವೈದ್ಯ, ದೀಪ್ತಿ ಅಯ್ಯನಗೌಡರ, ಮೃತ್ಯುಂಜಯ ಅರಳಿಮಟ್ಟಿಮಠ, ಅಭಿಷೇಕ ಬಾರಕೇರ, ಭಾರತಿ ಬಾಡಗಿ, ಉಮಾ ಅಗಡಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net