

ಉಡುಪಿ: ಸರ್ಕಾರಕ್ಕೆ ಸಲ್ಲಿಕೆ ಮಾಡಿರುವುದು ಜಾತಿ ಗಣತಿಯ ವರದಿಯಲ್ಲ. ಅದು, ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನೊಳಗೊಂಡ ಅಧ್ಯಯನ ವರದಿಯಾಗಿದೆ. ಆ ವರದಿಯಲ್ಲಿ ಜಾತಿ ಎನ್ನುವುದು ಒಂದು ಅಂಶ ಮಾತ್ರ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಧ್ಯಮದವರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ರಾಜ್ಯದ 1,351 ಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಅವರ ಉದ್ಯೋಗ ಸೇರಿದಂತೆ ಕುಟುಂಬಗಳ ಸ್ಥಿತಿ-ಗತಿ ಹೇಗಿದೆ ಎಂದು ಆಯೋಗ ನಡೆಸಿದ ಅಧ್ಯಯನದ ನೈಜ ಹಾಗೂ ಸತ್ಯವನ್ನೊಳಗೊಂಡ ಅಂತಿಮ ವರದಿಯನ್ನು 29ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದೇನೆ. ಅದಿನ್ನೂ ಸಚಿವ ಸಂಪುಟದಲ್ಲಿ ಚರ್ಚೆಯೇ ಆಗಿಲ್ಲ. ಸರ್ಕಾರ ಸಮ್ಮತಿಯನ್ನೂ ನೀಡಿಲ್ಲ. ವರದಿ ಬಹಿರಂಗವೂ ಆಗಿಲ್ಲ. ಆದರೂ ಕೆಲವರು ವರದಿ ವೈಜ್ಞಾನಿಕವಾಗಿ ಸರಿ ಇಲ್ಲ ಎಂದು ಹೇಗೆ ಹೇಳುತ್ತಾರೆ ಎಂದು ನನಗೂ ಅರ್ಥವಾಗುತ್ತಿಲ್ಲ.
ಆಯೋಗದ ಹಿಂದಿನ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ಸಂಗ್ರಹಿಸಿದ್ದ ದತ್ತಾಂಶದ ಆಧಾರದ ಮೇಲೆಯೇ ನಾನು ಅಧ್ಯಕ್ಷನಾದ ಬಳಿಕ ಅಧ್ಯಯನ ನಡೆಸಿ ವರದಿ ನೀಡಿದ್ದೇನೆ. ಸರ್ಕಾರದಿಂದ ಇನ್ನೂ ಮಾನ್ಯತೆ ಲಭಿಸದ್ದರಿಂದ ಎಷ್ಟು ಶಿಾರಸು ಇದೆ, ಶಿಾರಸಿನಲ್ಲಿ ಏನಿದೆ ಎಂದು ಹೇಳುವುದು ಕಾನೂನು ಉಲ್ಲಂಘಿಸಿದಂತಾಗುತ್ತದೆ. ಆದರೆ, ಈ ವರದಿಯಿಂದ ಜಾತಿ&ಸಮುದಾಯಗಳಿಗೆ ಸರ್ಕಾರಿ ಸೌಲಭ್ಯ ಸಿಗಲು ಸಹಾಯವಾಗುತ್ತದೆಯೇ ಹೊರತು ಯಾರಿಗೂ ತೊಂದರೆಯಾಗದು ಎಂದು ಹೇಳಬಲ್ಲೆ.
ಲಭ್ಯವಿದ್ದ ದತ್ತಾಂಶಗಳ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಂದರ್ಭದಲ್ಲಿ 1,351 ಜಾತಿಗಳ ಸಮೀೆ ನಡೆಸಲಾಯಿತು, ಇದೇ ಸಂದರ್ಭದಲ್ಲಿ ಹೆಚ್ಚುವರಿಯಾಗಿ 350ಕ್ಕೂ ಅಧಿಕ ಜಾತಿಗಳು ಪತ್ತೆಯಾದವು. ಒಟ್ಟಿಗೆ 1,751 ಜಾತಿಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿ&ಗತಿಗಳ ಮಾಹಿತಿಯನ್ನು ಇಂಡಿಕೇಶನ್ ಮೂಲಕ ಹಾಗೂ ಅವರೆಲ್ಲ ಯಾವ ಪ್ರವರ್ಗಕ್ಕೆ ಸೇರುತ್ತಾರೆ ಎಂಬುದನ್ನೂ ವ್ಯವಸ್ಥಿತವಾಗಿ ಸಿದ್ಧಪಡಿಸಿದ್ದೇವೆ. ಇದು ಬಹಳ ವಿಸ್ತಾರವಾದ ಪ್ರಕ್ರಿಯೆಯಾಗಿತ್ತು. ವರದಿ ಸಿದ್ಧಪಡಿಸಲು ಸರ್ಕಾರ ಸಾಕಷ್ಟು ಕಾಲಾವಕಾಶ ನೀಡಿತ್ತಲ್ಲದೆ, ಎರಡು ಸಲ ಅವಧಿ ವಿಸ್ತರಣೆಯನ್ನೂ ಮಾಡಿತ್ತು.
ಅಧ್ಯಯನ ನಡೆದ ರೀತಿ, ತಗುಲಿದ ವೆಚ್ಚವೆಷ್ಟು?
& ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಎನ್ನುವುದಾಗಿ ಮೂರು ವಿಭಾಗದಲ್ಲಿ ಜಾತಿ ವಿಂಗಡಿಸಿ ಮೀಸಲಾತಿ ನಿಗದಿಪಡಿಸಲಾಗಿದೆ. ಅನಾಥ ಮಕ್ಕಳಿಗೂ ಮೀಸಲಾತಿ ನೀಡಿರುವುದು ವಿಶೇಷವಾಗಿದೆ. ಅಧ್ಯಯನಕ್ಕೆ ಸುಮಾರು 163 ಕೋಟಿ. ರೂ. ವೆಚ್ಚವಾಗಿದೆ. 2015ರಲ್ಲಿದ್ದ ಒಟ್ಟು 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನರ ಸಮೀೆ ನಡೆಸಲಾಗಿದೆ. ಈ ಕಾರ್ಯಕ್ಕಾಗಿ 1.33 ಲಕ್ಷ ಶಿಕ್ಷಕರು, 22,199 ಮೇಲ್ವಿಚಾರಕರು, 2,588 ತರಬೇತುದಾರರು, 727 ಚಾರ್ಜ್ ಅಧಿಕಾರಿಗಳು ಸೇರಿ ಸುಮಾರು 1.66 ಲಕ್ಷ ಜನರು 1 ಕೋಟಿ 35 ಲಕ್ಷ ಕುಟುಂಬಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಶೇ.97 ಸಾಧನೆಯ ದರವಿದೆ.
ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸಂದ ಪ್ರಧಾನ ಕಾರ್ಯದರ್ಶಿ ನಜೀರ್, ಉಡುಪಿ ಪ್ರೆಸ್ಕ್ಲಬ್ ಸಂಚಾಲಕ ಅಜಿತ್, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಇದ್ದರು.