

ಉಡುಪಿ: ಕರಾವಳಿಯ ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ಉತ್ತಮ ಆರೋಗ್ಯ ಪಡೆಯಬಹುದು. ಹಿಂದಿನ ಕಾಲದಲ್ಲಿ ಈ ಆಹಾರ ಕ್ರಮ ಅನಿವಾರ್ಯವಾಗಿದ್ದರೆ ಇಂದು ್ಯಾಶನ್ ಆಗಿ ಬದಲಾಗಿದೆ. ರುಚಿಕರ ಖಾದ್ಯವನ್ನೇ ಸೇವಿಸಿದರೆ ಆರೋಗ್ಯ ಕೆಡುತ್ತದೆ. ನಾಲಿಗೆಗೆ ಕಹಿಯಾದರೂ ದೇಹಕ್ಕೆ ಹಿತಕರ ಆಹಾರ ಸೇವನೆ ಮಾಡಬೇಕು ಎಂದು ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.
ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲೆಯ 10 ಬ್ಲಾಕ್ಗಳ ಸಹಯೋಗದೊಂದಿಗೆ ಜರಗಿದ ಆಟಿದ ಕೂಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಚಂದ್ರಕಲಾ ಡಿ. ರಾವ್ ಆಟಿಕೂಟ ಉದ್ಘಾಟಿಸಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ಕುಮಾರ್ ಕೊಡವೂರು, ಮುಖಂಡರಾದ ವೆರೋನಿಕಾ ಕರ್ನೆಲಿಯೋ, ರಮೇಶ್ ಕಾಂಚನ್, ಹರೀಶ್ಕಿಣಿ, ಅಣ್ಣಯ್ಯ ಶೇರಿಗಾರ್, ಭಾಸ್ಕರ್ರಾವ್ ಕಿದಿಯೂರು, ಸರಳಾ ಕಾಂಚನ್, ಜ್ಯೋತಿ ಹೆಬ್ಬಾರ್, ಲಕ್ಷಿ$್ಮ ಭಟ್, ಮಮತಾ ಶೆಟ್ಟಿ, ಗೋಪಿ ಕೆ. ನಾಯ್ಕ್, ದೇವಕಿ ಸಣ್ಣಯ್ಯ, ಮಂಜುಳಾ ದೇವಾಡಿಗ, ಸಂದೇಶ್ ಶೆಟ್ಟಿ, ರೇಖಾ ಸುವರ್ಣ, ಅನಿತಾ ಡಿ'ಸೋಜಾ ಉಪಸ್ಥಿತರಿದ್ದರು. ಗೀತಾ ವಾಗ್ಲೆ ಸ್ವಾಗತಿಸಿ, ಶಾಂತಿ ಪಿರೇರಾ ನಿರೂಪಿಸಿದರು.