ಬೆಳಗಾವಿಯಲ್ಲಿ ವರುಣನ ಆರ್ಭಟ

3012012
Published on

ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಮತ್ತೊಮ್ಮೆ ಮಳೆ ಅಬ್ಬರಿಸಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಧ್ಯಾಹ್ನ 2 ಗಂಟೆಯ ವೇಳೆಗೆ ಗಂಟೆಗಳ ಕಾಲ ಅಬ್ಬರದ ಮಳೆ ಸುರಿಯಿತು. ಬಳಿಕ ಮತ್ತೆ 4 ಗಂಟೆಗೆ ರಭಸವಾಗಿ ವರ್ಷಧಾರೆಯಾಯಿತು.

ರಾತ್ರಿ ಎಂಟು ಗಂಟೆಯ ವೇಳೆ ಸಿಡಿಲಿನ ಅಬ್ಬರವೂ ಇತ್ತು. ಮಳೆ ಆರ್ಭಟದಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಜನರು ಪರದಾಡುವಂತಾಗಿತ್ತು.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣ, ಗಾಂಧಿನಗರ, ಭೋವಿಗಲ್ಲಿ, ಸಮರ್ಥ ನಗರ, ಶಹಾಪುರ, ವಡಗಾವಿ, ಯಳ್ಳೂರ ರಸ್ತೆ ಸೇರಿದಂತೆ ನಗರದ ವಿವಿಧ ಕಡೆ ಚರಂಡಿಗಳು ಬ್ಲಾಕ್ ಆಗಿದ್ದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಹೀಗಾಗಿ ಕೆಲ ಕಾಲ ಪಾದಚಾರಿಗಳು, ಬೈಕ್ ಸವಾರರು ಸಂಚಾರಕ್ಕೆ ಸಮಸ್ಯೆ ಅನುಭವಿಸಿದರು.

58.9 ಮಿ.ಮೀ. ಮಳೆ: ನಗರ ಮತ್ತು ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮಂಗಳವಾರ 58.9 ಮಿ.ಮೀ. ಮಳೆಯಾಗಿದೆ. ಹುಕ್ಕೇರಿ, ಖಾನಾಪುರ, ಬೆಳಗಾವಿ ತಾಲೂಕಿನ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net