ಲೋಕಾಯುಕ್ತ ನ್ಯಾಯಮೂರ್ತಿಗಳ ಜಿಲ್ಲಾ ಪ್ರವಾಸ

Deadline for purchasing FAQ sunflowers
Published on

ವಿಜಯಪುರ : ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ ಆ. 8 ರಿಂದ 12 ರವರೆಗೆ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 8 ರಂದು ಸಂಜೆ ಬೆಳಗಾವಿಯಿಂದ ಜಿಲ್ಲೆಯ ಪಡೇಕನೂರಗೆ ಆಗಮಿಸಿ ವಾಸ್ತವ್ಯ ಮಾಡುವರು. 11 ರಂದು ಬೆಳಗ್ಗೆ 8.30ಕ್ಕೆ ಪಡೇಕನೂರದಿಂದ ಹೊರಟು ವಿಜಯಪುರಕ್ಕೆ ಆಗಮಿಸಿ, ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೇಲೆ ಮತ್ತೆ ಪಡೇಕನೂರಗೆ ಪ್ರಯಾಣ ಬೆಳೆಸಿ ವಾಸ್ತವ್ಯ ಮಾಡಲಿದ್ದಾರೆ. 12 ರಂದು ಬೆಳಗ್ಗೆ 9 ಗಂಟೆಗೆ ವಿವಿಧ ಕಾರ್ಯಗಳ ಪರಿಶೀಲನೆ ನಡೆಸಿ, ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net