ಜಿಲ್ಲಾ ತತ್ಪಪದಕಾರರ ಸಮ್ಮೇಳನ ಅ. ೧೨ಕ್ಕೆ

10 ckm 5 suri srinivaas
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು.
Published on

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಗಡೀಹಳ್ಳಿಯಲ್ಲಿ ಪ್ರಥಮ ಜಿಲ್ಲಾ ತತ್ವಪದಕಾರರ ಸಮ್ಮೇಳನ ಅಕ್ಟೋಬರ್ ೧೨ ರಂದು ನಡೆಯುತ್ತಿದ್ದು, ಗುರುಗೋವಿಂದರ್ಯರ ಶಿಷ್ಯೆ ಹನುಮಕ್ಕ ಸಮ್ಮೇಳನ ಅಧ್ಯಕ್ಷೆಯಾಗಿದ್ದಾರೆ. ಸಮ್ಮೇಳದಲ್ಲಿ ೨೪ ಜನರಿಗೆ ತತ್ವಪದ ಶ್ರೀ ಮತ್ತು ೩ ಮಂದಿಗೆ ತತ್ವಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್, ಗಡೀಹಳ್ಳಿಯ ಕಾಳಿಕಾಂಭ ದೇವಾಲಯ ಸಮಿತಿ ಆಶ್ರಯದಲ್ಲಿ ತತ್ವಪದಕಾರರ ಸಮ್ಮೇಳನ ನಡೆಯುತ್ತಿದೆ. ಸಂತಶಿಶುನಾಳ ಶರೀಫರ ಮಹಾಮಂಟಪ, ಪರಪ್ಪಸ್ವಾಮಿಗಳ ಮಹಾದ್ವಾರ ಹಾಗೂ ಗುರುಗೋವಿಂದರ್ಯರ ವೇದಿಕೆ ನಿರ್ಮಾಣಗೊಳ್ಳಲಿದೆ. ಸಮ್ಮೇಳನದಲ್ಲಿ ತರೀಕೆರೆ, ಅಜ್ಜಂಪುರ ಮತ್ತು ಕಡೂರು ತಾಲೂಕಿನಿಂದ ೪೮ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಇವರುಗಳಿಗೆ ತತ್ವಪದ ಗಾಯನ ಸ್ಪರ್ಧೆ ನಡೆಯುತ್ತಿದ್ದು, ವಿಜೇತರಿಗೆ ಪ್ರಥಮ ಬಹುಮಾನ ೮ಸಾವಿರ ನಗದು, ದ್ವಿತೀಯ ೫ಸಾವಿರ, ತೃತೀಯ ೨ಸಾವಿರ ರೂ. ನೀಡಲಾಗುವುದು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿಪತ್ರ ನೀಡಲಾಗುವುದು. ಸ್ಪರ್ಧೆಗೆ ೩೦೦ ಪ್ರವೇಶ ಶುಲ್ಕ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೊಂಡೇದಹಳ್ಳಿಯ ತಿಪ್ಪೇಶಪ್ಪ, ಯಗಟಿಯ ನಿವೃತ್ತ ಎಎಸ್‌ಐ ಚಂದ್ರಪ್ಪ, ಶಿವನಿಯ ಸೀತಾರಾಮಪ್ಪ, ಅಜ್ಜಂಪುರ ಹೆಚ್.ಗೋವಿಂದಪ್ಪ, ಹಿರೇನಲ್ಲೂರಿನ ಹಳ್ಳಪ್ಪ, ಹನುವನಹಳ್ಳಿ ಮರಡಿಚಂದ್ರಪ್ಪ, ಗಡೀಹಳ್ಳಿ ಅಂಧಮAಜ ಮ್ಮ, ಭಾಗ್ಯಮ್ಮ, ಸಿದ್ದಮ್ಮ, ತಿಪ್ಪೇಶಪ್ಪ, ಮುಗಳಿ ವೇದಾವತಿ, ಗೀತಮ್ಮ, ಯಳಗೊಂಡನಹಳ್ಳಿ ಕೃಷ್ಣಪ್ಪ, ಅರೇಹಳ್ಳಿ ಅಂಧರಾಮಣ್ಣ,ಸೊಲ್ಲಾಪುರದ ಶಿವಮ್ಮ, ಮುದಿಗೆರೆ ನಾಗಣ್ಣ, ಹನುಮಮತಪ್ಪ, ಮಲ್ಲಾಪುರದ ಕಲ್ಲಪ್ಪ, ಚಿಕ್ಕನಲ್ಲೂರು ತಿಪ್ಪೇಶಪ್ಪ, ಚೀರನಹಳ್ಳಿಯ ವೆಂಕಟೇಶಪ್ಪ, ಯಳಗೊಂಡನಹಳ್ಳಿಯ ತಿಮ್ಮಯ್ಯ, ಯಗಟಿ ಯ ಜಗದೀಶ್ವರಾಚಾರ್, ಶಿವನಿಯ ಮಲ್ಲಮ್ಮ ಅವರುಗಳು ತತ್ವಪದ ಶ್ರೀ ಪ್ರಶಸ್ತಿ ಪಡೆದರೆ,ತತ್ವಪದ ಸಿರಿ ಪ್ರಶಸ್ತಿಯನ್ನು ಗಡೀಹಳ್ಳಿಯ ಕಮಲಮ್ಮ, ಪದ್ಮಾವತಮ್ಮ, ಯಗಟಿಯ ವೈ.ಕೆ.ಬೊಮ್ಮಣ್ಣ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಅಂದು ಬೆಳಗ್ಗೆ ೧೦ ಗಂಟೆಗೆ ಸಮ್ಮೇಳನವನ್ನು ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಅಪ್ಪಗೆರೆ ತಿಮ್ಮರಾಜು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಜಿ.ಎಚ್.ಶ್ರೀನಿವಾಸ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಪರಿಷತ್ ಜಿಲ್ಲಾ ಖಜಾಂಚಿ ಬಿ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ತತ್ವಪದ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಂಜೆ ೪ಗಂಟೆಗೆ ಸಮಾರೋಪ ಸಮಾರಂಭ ನಡೆಯುವುದು. ರಾಷ್ಟç ಪ್ರಶಸ್ತಿ ಪುರಸ್ಕೃತೆ ಮುಗುಳಿ ಲಕ್ಷ್ಮೀದೇವಮ್ಮ ಸಮಾರೋಪ ನುಡಿಗಳನ್ನಾಡುವರು. ಜಾನಪದ ಪ್ರಶಸ್ತಿ ಪುರಸ್ಕೃತ ಮಾಳೇನಹಳ್ಳಿ ಬಸಪ್ಪ ತತ್ವಸಿರಿ ಪ್ರಶಸ್ತಿ ಪ್ರದಾನಮಾಡುವರು. ಸಮ್ಮೇಳನಾಧ್ಯಕ್ಷರಿಗೆ ಮಾಜಿ ಶಾಸಕರಾದ ಎಸ್.ಎಂ.ನಾಗರಾಜು, ಡಿ.ಎಸ್.ಸುರೇಶ್ ಅಭಿನಂದಿಸಲಿದ್ದಾರೆ. ತತ್ವ ಶ್ರೀ ಪ್ರಶಸ್ತಿಯನ್ನು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಎಂ.ಕೃಷ್ಣಮೂರ್ತಿ, ಎಸ್.ಬಿ.ಆನಂದಪ್ಪ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಲ್.ಮಂಜಪ್ಪ, ಮುಖಂಡರಾದ ಪಿ.ಪ್ರಕಾಶ್, ರವಿದಳವಾಯಿ ತಿಮ್ಮಯ್ಯ, ಮಂಜಪ್ಪ, ಕುಪ್ಪಾಳಿನ ಶಾಂತಮೂರ್ತಿ, ವಿಜಯಲಕ್ಷ್ಮಿ ವಿಶ್ವನಾಥ, ಸಚಿನ್, ಸಿಂಗಟಗೆರೆ ಸಿದ್ದಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net