ಸ್ಕೇಟಿಂಗ್ ಚಾಂಪಿಯನ್ ಶಿಪ್ ಆಯ್ಕೆ ಟ್ರಯಲ್ಸ್

IMG_20231008_161808_209.jpg
Published on

ಹುಬ್ಬಳ್ಳಿ: ಕರ್ನಾಟಕ ರೋಲರ್ ಸ್ಕೇಟಿಂಗ್ ಅಕಾಡೆಮಿ (ಕೆಆರ್ಎಸ್ಎ) ಹಾಗೂ ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ (ಡಿಡಿಆರ್ಎಸ್ಎ) ವತಿಯಿಂದ ಭಾನುವಾರ ಜಿಲ್ಲಾ ಸ್ಕೇಟಿಂಗ್ ಚಾಂಪಿಯನ್ ಶಿಪ್ ಹಾಗೂ ಆಯ್ಕೆ ಟ್ರಯಲ್ಸ್ ನಡೆಸಲಾಯಿತು.

ಧಾರವಾಡದ ಐಐಟಿ ಬಳಿಯ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದ ರಿಂಕ್ನಲ್ಲಿ ಆಯೋಜಿಸಿದ್ದ ಸ್ಕೇಟಿಂಗ್ ಆಯ್ಕೆ ಟ್ರಯಲ್ಸ್ನಲ್ಲಿ (ಪ್ರಕ್ರಿಯೆ) ನೂರಕ್ಕೂ ಹೆಚ್ಚು ಸ್ಪಧಿರ್ಗಳು ಭಾಗವಹಿಸಿದ್ದರು.

ಇನ್ ಲೈನ್ ಹಾಗೂ ಕ್ವಾಡ್ ಸ್ಕೇಟ್ ವಿಭಾಗದಲ್ಲಿ ವಿವಿಧ ವಯೋಮಾನದ ಸ್ಪಧಿರ್ಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರಿಗೆ ಪದಕ ನೀಡಿ ಸನ್ಮಾನಿಸಲಾಯಿತು.

ಡಿಡಿಆರ್ ಎಸ್ಎ ಕಾರ್ಯದರ್ಶಿ ಮಲ್ಲಿಕಾರ್ಜುನ ಕಾಡಪ್ಪನವರ, ಸ್ಕೇಟಿಂಗ್ ಕೋಚ್ ಗಳಾದ ಶಶಿಧರ ಪಾಟೀಲ, ಅಕ್ಷಯ, ವಿರುಪಾಕ್ಷ ಕಮ್ಮಾರ ಇತರರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net