ಮಾ.9ರಂದು ಜಿಲ್ಲಾ ಶಿವಸಿಂಪಿ ಸಮಾವೇಶ

District Shivsimpi convention on March 9th
ಬಾದಾಮಿಯಲ್ಲಿ ಜರುಗುವ ಶಿವಸಿಂಪಿ ಸಮಾಜದ ಜಿಲ್ಲಾ ಸಮಾವೇಶದ ಪರಿಕರಗಳನ್ನು ಬನಹಟ್ಟಿಯಲ್ಲಿ ಬಿಡುಗಡೆ ಮಾಡಲಾಯಿತು. ಚನ್ನಬಸಪ್ಪ ಅಥಣಿ, ಶಿವಪುತ್ರಪ್ಪ ಶಿರಸಿ, ಅಶೋಕ ಶಿವಸಿಂಪಿಗೇರ, ಅಶೋಕ ನಾಗಠಾಣ, ಚಂದ್ರಶೇಖರ ಸೂಡಿ, ಅನೀಲ ನಾಗಠಾಣ, ಗಣೇಶ ಕುಬಸದ, ಪ್ರಭಾಕರ ಮೊಳೇದ ಇದ್ದಾರೆ.
Published on

ರಬಕವಿ/ಬನಹಟ್ಟಿ: ಬಾದಾಮಿಯ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವ ಮಂಟಪದಲ್ಲಿ ಮಾ.9ರಂದು ಬಾಗಲಕೋಟೆ ಜಿಲ್ಲಾ ಶಿವಸಿಂಪಿ ಸಮಾವೇಶ ಹಾಗೂ ಶಿವದಾಸಿಮಯ್ಯನವರ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಬಾದಾಮಿ ತಾಲೂಕಾಧ್ಯಕ್ಷ ನಾಗಪ್ಪ ಶಿವಣಗಿ ತಿಳಿಸಿದರು.

ಬನಹಟ್ಟಿಯಲ್ಲಿ ಶನಿವಾರ ಪರಿಕರಗಳನ್ನು ಬಿಡಗಡೆಗೊಳಿಸಿ ಮಾತನಾಡಿದ ಅವರು, ಅನೇಕ ಮಠಾಧೀಶರು, ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಪ್ರತಿಭಾ ಪುರಸ್ಕಾರ ಹಾಗು ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದರು.

ಸಮಾಜದ ಹಿರಿಯರಾದ ಚನ್ನಬಸಪ್ಪ ಅಥಣಿ, ಶಿವಪುತ್ರಪ್ಪ ಶಿರಸಿ, ಅಶೋಕ ಶಿವಸಿಂಪಿಗೇರ, ಅಶೋಕ ನಾಗಠಾಣ, ಚಂದ್ರಶೇಖರ ಸೂಡಿ, ಅನೀಲ ನಾಗಠಾಣ, ಗಣೇಶ ಕುಬಸದ, ಪ್ರಭಾಕರ ಮೊಳೇದ, ಕಿರಣ ಆಳಗಿ, ಸಿದ್ಲಿಂಗಪ್ಪ ತುಂಗಳ, ಬಸವರಾಜ ಮೋಟಗಿ, ಬಸು ಐವಳ್ಳಿ, ಮಂಜು ಉಮದಿ, ಸದಾಶಿವ ಪಾವಟೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net