ಶಿವರಾತ್ರಿಗೆ ತರಹೇವಾರಿ ಹಣ್ಣುಗಳು

district shivaratri fruts mela minister shivaraj tangadagi
Published on

ಕೊಪ್ಪಳ: ತೋಟಗಾರಿಕೆ ಇಲಾಖೆಯಿಂದ ಪ್ರತಿ ವರ್ಷದಂತೆ ಶಿವರಾತ್ರಿ ಅಂಗವಾಗಿ ವಿವಿಧ ಹಣ್ಣುಗಳು, ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದ್ದು, ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.

ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಹಲಸು, ಅಣಬೆ ವಿದೇಶಿ ಹಣ್ಣಿನ ತಳಿಗಳಾದ ಅವಕಾಡೋಫ್ಲಮ್​, ಪೀಚ್​, ಲಿಚ್ಚಿ, ರೆಡ್​ಗ್ಲೋಬ್​, ಕಿವಿ ಫ್ರೂಟ್​, ರಾಮಭೂತಾನ, ಮ್ಯಾಂಗೋಸ್ಟೀನ್​, ಜಪಾನ ಮ್ಯಾಂಗೊ, ಐಸ್​ಗಾವಾ, ಅಮೇರಿಕನ್​ ಆಪಲ್​, ಗ್ರೀನ್​ ಆಪಲ್​, ವಿದೇಶಿ ಪ್ಯಾಷನ್​ ಪ್ರೂಟ್​, ವೈನ್​ಗ್ರೇಪ್​ ಕಣ್ತುಂಬಿಕೊಳ್ಳಬಹುದು. ಜಿಲ್ಲೆಯ ರೈತರು ಬೆಳೆದ ಪೇರಲ, ಅಂಜೂರ ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನದಲ್ಲಿ ಇಡಲಾಗಿದೆ.

30ಕ್ಕೂ ಹೆಚ್ಚು ರೈತರು, 15 ಎ್​ಪಿಒ, ಹಾಪ್​ಕಾಮ್ಸ್​ ಸ್ಟಾಲ್​ ಹಾಕಿ ಮಾರಾಟ ಮಾಡುತ್ತಿದ್ದಾರೆ. ಸೆಲ್ಫಿ ಪಾಯಿಂಟ್​ ನಿರ್ಮಿಸಿದ್ದು ಜನರು ೋಟೋ ತೆಗೆಸಿಕೊಂಡು ಖುಷಿಪಟ್ಟರು. ಇಲಾಖೆಯಿಂದಲೇ ರಟ್ಟಿನ ಬಾಕ್ಸ್​ ನೀಡಿದ್ದು, ಅದರಲ್ಲಿ ರೈತರ ವಿವರ, ಬೆಲೆ, ಇನ್ನಿತರ ಮಾಹಿತಿ ನೀಡಲಾಗಿದೆ. ಹಣ್ಣುಗಳಲ್ಲಿನ ಪೋಷಕಾಂಶ, ಖನಿಜಗಳು, ಅವುಗಳಿಂದಾಗುವ ಆರೋಗ್ಯ ಪ್ರಯೋಜನಗಳ ಮಾಹಿತಿ ಲಕ ಹಾಕಲಾಗಿದೆ.

ಎಡಿಸಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾ.ಮಹೇಶ್​ ಮಾಲಗಿತ್ತಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ.ಶಂಕ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net