ಮೂಲ್ಕಿ ಠಾಣೆಗೆ ಜಿಲ್ಲಾ ಹಿರಿಯ ನ್ಯಾಯಾಧೀಶೆ ಭೇಟಿ : ಸಿಬ್ಬಂದಿ ಕಾರ್ಯವೈಖರಿ ಸಹಿತ ಕಡತಗಳ ಪರಿಶೀಲನೆ

Mul_police
Published on

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶೆ ಶೋಭಾ ಬಿಜೆ ಅವರು ಮೂಲ್ಕಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೊಲೀಸ್ ಠಾಣಾ ಸಿಬ್ಬಂದಿ ಕಾರ್ಯವೈಖರಿ ಹಾಗೂ ಕಡತಗಳ ಪರಿಶೀಲನೆ ನಡೆಸಿದರು.

ಮೂಲ್ಕಿ ಠಾಣೆಗೆ ಆಗಮಿಸಿದ ನ್ಯಾಯಾಧೀಶರು ಠಾಣೆಗೆ ದೂರು ನೀಡಲು ಬರುವವರನ್ನು ಹೊರಗಡೆ ಕುಳಿತುಕೊಳ್ಳಲು ಸೂಚಿಸುತ್ತಿರುವ ಬಗ್ಗೆ ಅಸವಾಧಾನ ವ್ಯಕ್ತಪಡಿಸಿದರು. ಠಾಣೆಯ ಎದುರು ಭಾಗದಲ್ಲಿ ಸಮರ್ಪಕ ನಾಮಫಲಕ ಅಳವಡಿಸಲು ಸೂಚನೆ ನೀಡಿದರು.

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿ ಸೂಕ್ಷ್ಮ ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಅಪರಾಧ ಪ್ರಕರಣಗಳು ವಿಪರೀತವಾಗುತ್ತಿದ್ದು, ನಿಯಂತ್ರಿಸಬೇಕು. ಜನರಿಗೆ ೆಕ್ಸೋ ಬಗ್ಗೆ ವಾಹಿತಿ ನೀಡಬೇಕು. ಅಪರಾಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕೆ.ಎಸ್.ರಾವ್ ನಗರದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾನೂನು ವಾಹಿತಿ ಶಿಬಿರ ಶ್ರೀ ನಡೆಸಬೇಕು ಎಂದು ಸೂಚನೆ ನೀಡಿದರು.

ಇದೇ ಸಂದರ್ಭ ಸ್ಥಳೀಯರು ಠಾಣೆಗೆ ನೂತನ ಗಸ್ತು ವಾಹನ ಹಾಗೂ ಮೂಲ್ಕಿ ತಾಲೂಕಿಗೆ ನೂತನ ನ್ಯಾಯಾಲಯ ಸ್ಥಾಪನೆಗೆ ನ್ಯಾಯಾಧೀಶರ ಬಳಿ ಮನವಿ ವಾಡಿದರು.

ಎಸ್‌ಐ ಅನಿತಾ, ಜಿಲ್ಲಾ ಕಾನೂನು ನೆರವು ಕೇಂದ್ರದ ಸಲಹೆಗಾರ ಮಂಜುನಾಥ ಆರ್.ಕೆ., ವಕೀಲರಾದ ಶಶಿಕುವಾರ್ ಕೆ.ಎಸ್. ರಾವ್ ನಗರ, ಮೂಲ್ಕಿ ಠಾಣೆಯ ಸಹಾಯಕ ಉಪ ನಿರೀಕ್ಷಕರಾದ ಉಮೇಶ್, ಸಂಜೀವ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net