

ಕಿಕ್ಕೇರಿ: ಸಮೀಪದ ಕುಂದೂರು ಗ್ರಾಮದ ವೀರಗಾಸೆ ಕಲಾವಿದ ಕುಂದೂರು ಜಗದೀಶ್(54) ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕುಂದೂರು ಗ್ರಾಮದ ವೀರಭದ್ರಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪುಟ್ಟಸ್ವಾಮಪ್ಪ ಅವರ ಪುತ್ರರಾಗಿರುವ ಜಗದೀಶ್, 4ದಶಕಗಳಿಂದ ವೀರಗಾಸೆ ನೃತ್ಯ ಪ್ರದರ್ಶನದಲ್ಲಿ ತೊಡಗಿದ್ದಾರೆ. ವಂಶಪಾರಂಪರ್ಯವಾಗಿ ಬಂದಿರುವ ಕಲಾಸೇವೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಲವು ಶಿಷ್ಯರನ್ನು ಹುಟ್ಟುಹಾಕಿದ್ದಾರೆ.
ತಮಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಕಲಾಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಯುವ ಪೀಳಿಗೆಗೆ ವೀರಗಾಸೆ, ವೀರಭದ್ರನ ಕುಣಿತ ಕಲಾಸೇವೆಯನ್ನು ಪರಿಚಯಿಸಬೇಕಿದೆ ಎಂದು ಹಂಬಲ ವ್ಯಕ್ತಪಡಿಸಿದರು.