

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಆಶ್ರಯದಲ್ಲಿ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಫೆ. 16ರಂದು ಜಿಲ್ಲಾ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವು ಹಿರೇಮಠ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ಕ್ಕೆ ಹಿರಿಯ ವಕೀಲ ಪಿ.ಎಚ್. ನೀರಲಕೇರಿ ಉದ್ಘಾಟಿಸುವರು ಎಂದರು.
ಒಲಿ0ಪಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ತಾಳಿಕೋಟಿ ಮಾತನಾಡಿ, 14ರಿಂದ 17 ವರ್ಷದೊಳಗಿನ ಬಾಲಕ- ಬಾಲಕಿಯರ ಒಲಿಂಪಿಕ್ಸ್ ಆಯೋಜಿಸಲಾಗಿದೆ. 100 ಮೀ., 600 ಮೀ., ಉದ್ದ ಜಿಗಿತ, ಗುಂಡು ಎಸೆತ, 4* 100 ಮೀ. ರಿಲೇ ಕ್ರೀಡೆ ಇರಲಿದ್ದು, ಉಚಿತ ಪ್ರವೇಶವಿದೆ. ಈಗಾಗಲೇ ನೋಂದಣಿ ಆರಂಭಗೊAಡಿದ್ದು, ಕ್ರೀಡಾಕೂಟದ ಆರಂಭದವರೆಗೂ ನಡೆಯಲಿದೆ ಎಂದರು.