ಜಿಲ್ಲೆಯ ಹಲವೆಡೆ ಉತ್ತಮ ಮಳೆ

01010101
Published on

ಬೆಳಗಾವಿ: ನಗರವೂ ಸೇರಿ ಜಿಲ್ಲೆಯ ಹಲವೆಡೆ ಮಂಗಳವಾರ ಉತ್ತಮ ಮಳೆ ಸುರಿಯಿತು. ತಾಲೂಕಿನ ಮಜಗಾವಿಯ ವಾಲ್ಮೀಕಿ ಗಲ್ಲಿಯಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಬೆಳಗಾವಿಯಲ್ಲಿ ಸೋಮವಾರ ರಾತ್ರಿಯೇ ಆರಂಭವಾದ ಮೃಗಶಿರ ಮಳೆ, ಮಂಗಳವಾರ ಬೆಳಗ್ಗೆ ಚುರುಕು ಪಡೆದಿತ್ತು. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಜನರು ಪರದಾಡುವಂತಾಯಿತಲ್ಲದೆ ವ್ಯಾಪಾರ, ವಹಿವಾಟಿಗೂ ತೊಡಕಾಯಿತು.

ಯಡಿಯೂರಪ್ಪ ಮಾರ್ಗ, ತಹಸೀಲ್ದಾರ್ ಗಲ್ಲಿ ಸೇರಿ ನಗರದ ಹಲವು ಬಡಾವಣೆಗಳ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡಿದರು. ಬೈಲಹೊಂಗಲ, ಬೆಳವಡಿ, ದೊಡವಾಡ, ಚಿಕ್ಕೋಡಿಯಲ್ಲೂ ಉತ್ತಮ ಮಳೆಯಾಗಿದ್ದು, ನೇಸರಗಿಯಲ್ಲಿ ಸಾಧಾರಣ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net