ಜಿಲ್ಲಾ ಮಟ್ಟದ ಯುವ ಜನೋತ್ಸವ ಸ್ಪರ್ಧೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವ ಜನೋತ್ಸವ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಕರ್ನಾಟಕ ವಿಶ್ವ ವಿದ್ಯಾನಿಲಯ ಮತ್ತು ಜೆಎಸ್​ಎಸ್​ ಸಮೂಹ ಸಂಸ್ಥೆ ಆಶ್ರಯದಲ್ಲಿ ನ. 26ರಂದು ಬೆಳಗ್ಗೆ 9.30ಕ್ಕೆ ವಿದ್ಯಾಗಿರಿ ಜೆಎಸ್​ಎಸ್​ ಕಾಲೇಜು ಆವರಣದಲ್ಲಿನ ಸನ್ನಿಧಿ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಆಸಕ್ತ 15 ರಿಂದ 29 ವರ್ಷ ವಯೋಮಿತಿಯ ಸ್ಪರ್ಧಾಳುಗಳು ಹಾಗೂ ಯುವಕ, ಯುವತಿ ಮಂಡಳದ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ನ.26ರ ಬೆಳಗ್ಗೆ 9.30ರೊಳಗೆ ಹೆಸರು ನೋಂದಾಯಿಸಬಹುದು.

ಜನಪದ ನೃತ್ಯ (ವೈಯಕ್ತಿಕ ಹಾಗೂ ತಂಡ), ಜನಪದ ಗೀತೆ (ವೈಯಕ್ತಿಕ ಹಾಗೂ ತಂಡ), ಕವಿತೆ, ಕತೆ ಬರೆಯುವುದು, ಚಿತ್ರಕಲೆ ಸೇರಿ ವಿವಿಧ ಗುಂಪು ಹಾಗೂ ವೈಯಕ್ತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net