ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳು; ಫಲಿತಾಂಶ ಪ್ರಕಟ

Screenshot_2025-10-17-00-16-38-89.jpg
Published on

ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಜೆ.ಎಸ್.ಎಸ್.ಕಾಲೇಜಿನ ಉತ್ಸವ ಕಲಾಕ್ಷೇತ್ರದಲ್ಲಿ ಜರುಗಿದ, ಧಾರವಾಡ ಜಿಲ್ಲಾ ಮಟ್ಟದ ಯುವಜನೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾದ ಯುವಕ, ಯುವತಿಯರ ಫಲಿತಾಂಶ ಪ್ರಕಟಗೊಂಡಿದೆ.

ಸಂಜೆ ಸಮಾರಂಭ ವೇದಿಕೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣಪತ್ರ ಪ್ರಧಾನ ಮಾಡಲಾಯಿತು.

ಜಾನಪದ ನೃತ್ಯ (ತಂಡ):

ಪ್ರಥಮ-ಧಾರವಾಡ ಕಿಟಲ್ ಕಾಲೇಜ್,

ದ್ವಿತೀಯ-ಕೆಎಲ್ಇ ಮೃತ್ಯುಂಜಯ ಕಾಲೇಜ್, ತೃತೀಯ-ಅದರಗುಂಚಿ ಸಿಐಸಿ ಕಾಲೇಜ್.

ಜಾನಪದ ಗೀತೆ (ತಂಡ):

ಪ್ರಥಮ-ಧಾರವಾಡ ಕಿಟಲ್ ಮಹಾವಿದ್ಯಾಲಯ, ದ್ವಿತೀಯ- ಧಾರವಾಡ ಸತ್ಯ ಸಾಯಿ ಕಾಲೇಜ್ , ತೃತೀಯ- ಧಾರವಾಡ ಮಹಾಂತ ಕಾಲೇಜ್.

ಕಥೆ ಬರೆಯುವುದು (ವೈಯಕ್ತಿಕ):

ಪ್ರಥಮ- ವಿಶಾಲ ಪಾಟೀಲ, ದ್ವಿತೀಯ- ಸ್ವಾತಿ ಕಹರ, ತೃತೀಯ- ಸಂಗೀತಾ ಕದಮ್ಮನವರ.

ಕವಿತೆ ಬರೆಯುವುದು (ವೈಯಕ್ತಿಕ):

ಪ್ರಥಮ- ನೇಮಿನಾದ ಗುಂಜಲ್, ದ್ವಿತೀಯ- ಐಶ್ವರ್ಯ ಮಸ್ಕಿ ಶೆಟ್ಟರ, ತೃತೀಯ- ಶೋಭಾ ಪಾಟೀಲ.

ಚಿತ್ರಕಲೆ (ವೈಯಕ್ತಿಕ): ಪ್ರಥಮ- ಸ್ವಾತಿ ಎಸ್ ಕುರಾಡೆ, ದ್ವಿತೀಯ- ಆನಂದ್ ಇಮದೇನ್ನವರ, ತೃತೀಯ- ಕಾರ್ತಿಕ್ ಕಂಬಾರ.

ಘೋಷಣೆ (ವೈಯಕ್ತಿಕ): ಪ್ರಥಮ- ಕುಂತೇಶ್ ವಾಲಿಕಾರ್, ದ್ವಿತೀಯ- ಮಿಸ್ ಭಾ, ತೃತೀಯ- ಸುಜಾಳ ಎಸ್.

ವಿಜ್ಞಾನ ಮೇಲೆ ಪ್ರದರ್ಶನ (ವಯಕ್ತಿಕ): ಪ್ರಥಮ- ಧಾರವಾಡ ಕಿಟಲ್ ವಿಜ್ಞಾನ ಮಹಾವಿದ್ಯಾಲಯ, ದ್ವಿತೀಯ- ಶ್ರೀ ಸತ್ಯಸಾಯಿ ಕಾಲೇಜ್ , ತೃತೀಯ- ಶ್ರೀ ಸತ್ಯಸಾಯಿ ಕಾಲೇಜ್.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನಿವೃತ್ತ ಅಕಾಶವಾಣಿ ಹಿರಿಯ ಉದ್ಘೋಷಕರಾದ ಡಾ.ಶಶಿಧರ ನರೇಂದ್ರ ಹಾಗೂ ಸಹಾಯಕ ನಿರ್ದೆಶಕ ಸದಾನಂದ ಅಮರಾಪುರ, ಜಾನಪದ ಹಿರಿಯ ಕಲಾವಿದ ಹರ್ಲಾಪುರ ಗ್ರಾಮದ ಎಸ್.ಎಸ್.ಹಿರೇಮಠ, ಇಲಾಖೆ ಅಧೀಕ್ಷಕ ಸುರೇಂದ್ರ ಭಾವಿಕಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net