ಜಿಲ್ಲಾಮಟ್ಟದ ಯುವಜನೋತ್ಸವ ಸಮಾರಂಭ ಯುವಜನತೆ ಮೌಲ್ಯಾಧಾರಿತ ಸಂಸ್ಕೃತಿ ಮೈಗೂಡಿಸಿಕೊಳ್ಳಲಿ

District level youth festival ceremony to inculcate value-based culture in the youth
Published on

ವಿಜಯಪುರ:ಭಾರತ ಶ್ರೀಮಂತ ಸಂಸ್ಕೃತಿ ಪೋಷಿಸುವ ಜತೆಗೆ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸುತ್ತಿದೆ. ಅಂತಹ ಮೌಲ್ಯಾಧಾರಿತ ಸಂಸ್ಕೃತಿ ಮೈಗೂಡಿಸಿಕೊಳ್ಳಲು ಯುವಜನತೆ ಹಿಂದೇಟು ಹಾಕುತ್ತಿರುವ ಸಂಗತಿ ವಿಷಾದನೀಯ ಎಂದು ರಾಷ್ಟ್ರ ಪ್ರಶಸ್ತಿ ಪುರಸತರ ಫೆಡರೇಷನ್​ ರಾಷ್ಟ್ರೀಯ ಅಧ್ಯ ಡಾ. ಜಾವೀದ ಜಮಾದಾರ ಹೇಳಿದರು.ನಗರದ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿ.ಪಂ., ನೆಹರು ಯುವ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪಾಶ್ಚಾತ್ಯ ಸಂಸ್ಕೃತಿ ಅತಿಯಾದ ವ್ಯಾಮೋಹದಿಂದ ಯುವಜನತೆ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡುವುದಕ್ಕಿಂತ ನಮ್ಮ ನೆಲದ ಸಂಸ್ಕೃತಿ ಅಳವಡಿಸಿಕೊಳ್ಳಬೇಕು. ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಪಣತೊಡಬೇಕು. ಜನಪದ ಕಲೆಗಳು ಮಾನವೀಯ ಸಂಬಂಧದ ಸರಪಳಿಯಾಗಿದ್ದು, ಅದು ನಮ್ಮ ಪೂರ್ವಜರು ನೀಡಿದ ಅನುಪಮ ಕೊಡುಗೆ ಎಂದರು.ರಾಜ್ಯ ಯುವ ಪ್ರಶಸ್ತಿ ಪುರಸತ ಅರವಿಂದ ಕೊಪ್ಪ ಮಾತನಾಡಿ, ವಿಜಯಪುರ ಜಿಲ್ಲೆ ಜನಪದ ಕಲೆಗಳ ತವರೂರು. ಇಲ್ಲಿನ ಯುವಜನತೆ ಜನಪದ ಕಲೆಗಳನ್ನು ಪ್ರೀತಿಸಲು ಮುಂದಾಗಬೇಕು ಎಂದರು.

ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ ಪಾಟೀಲ ಅಧ್ಯತೆ ವಹಿಸಿ ಮಾತನಾಡಿ, ಯುವಜನತೆ ಶಿಣದ ಜತೆಗೆ ಸಂಸ್ಕೃತಿ , ಕ್ರೀಡೆ ಹಾಗೂ ಜೀವನ ಮೌಲ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಯುವ ಪ್ರಶಸ್ತಿ ಪುರಸತ ಸಂಜು ಖೋತ, ಎಕ್ಸಲೆಂಟ್​ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​., ಡಾ. ಡಿ.ಎನ್​. ಧರಿ ಉಪಸ್ಥಿತರಿದ್ದರು.

ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಸಮಾರಂಭವನ್ನು ಡಾ. ಜಾವೀದ ಜಮಾದಾರ ಉದ್ಘಾಟಿಸಿದರು. ರಾಜಶೇಖರ ದೈವಾಡಿ, ಅಶೋಕ ಪಾಟೀಲ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net